ನಾಳೆ ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಬಂದ್

entertainment | Thursday, March 8th, 2018
Suvarna Web Desk
Highlights

ಕನ್ನಡ ಚಿತ್ರ ಹೊರತು ಪಡಿಸಿ ಬೇರೆ ಭಾಷೆ ಚಿತ್ರಗಳು ಎಂದಿನಂತೆ ಪ್ರದರ್ಶನವಾಗಲಿದೆ. ಮಾರ್ಚ್​ 10 ರಿಂದ ಕನ್ನಡ ಚಿತ್ರಗಳ ಪ್ರದರ್ಶನವಾಗಲಿದೆ.

ಬೆಂಗಳೂರು(ಮಾ.08): ನಾಳೆ ರಾಜ್ಯಾದ್ಯಂತ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್'ಗಳಲ್ಲಿ ಸಿನಿಮಾ ಪ್ರದರ್ಶನ ಬಂದ್ ಮಾಡಲಾಗುತ್ತದೆ. ಯುಎಫ್​ಓ ಕ್ಯೂಬ್​ ಸಂಸ್ಥೆಗಳ ಶುಲ್ಕ ಹೆಚ್ಚಳ ಹಿನ್ನೆಲೆಯಲ್ಲಿ ಪ್ರದರ್ಶನ ನಿಲ್ಲಿಸಲಾಗುತ್ತದೆ.

ಕೆ.ಜಿ.ರಸ್ತೆಯಲ್ಲಿರುವ ಚಿತ್ರಮಂದಿರಗಳು ಸೇರಿದಂತೆ ಮಲ್ಟಿಫ್ಲೆಕ್ಸ್​ಗಳಲ್ಲಿ ಚಿತ್ರಪ್ರದರ್ಶನ ಸ್ಥಗಿತಗೊಳಿಸಲಾಗುತ್ತಿದ್ದು, ಮೊದಲ ಶೋನಿಂದ ಇಡಿದು 4 ಶೋ ಗಳ ಚಿತ್ರಪ್ರದರ್ಶನ ಇರುವುದಿಲ್ಲ. ಕನ್ನಡ ಚಿತ್ರ ಹೊರತು ಪಡಿಸಿ ಬೇರೆ ಭಾಷೆ ಚಿತ್ರಗಳು ಎಂದಿನಂತೆ ಪ್ರದರ್ಶನವಾಗಲಿದೆ. ಮಾರ್ಚ್​ 10 ರಿಂದ ಕನ್ನಡ ಚಿತ್ರಗಳ ಪ್ರದರ್ಶನವಾಗಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೆಲ ದಿನಗಳ ಹಿಂದೆ ತೀರ್ಮಾನಿಸಲಾಗಿತ್ತು ಎಂದು ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.

Comments 0
Add Comment

    ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ, ನಿಜವಾದ ಅರ್ಥ?

    entertainment | Friday, May 11th, 2018
    Suvarna Web Desk
    3:00