ಸಿಂಪಲ್ ಸುನಿ ನಿರ್ದೇಶನದಲ್ಲಿ  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಿರಿಕ್ ರಷ್ಮಿಕಾ ಮೊದಲ ಭಾರಿಗೆ ಒಟ್ಟಿಗೆ ಅಭಿನಯಿಸಿರೋ ಈ ಚಿತ್ರದ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ

ಮುಗುಳುನಗೆ ಹಿಟ್ ಆಯ್ತು. ಕಿರಿಕ್ ಪಾರ್ಟಿ ಕ್ಲಿಕ್ ಆಯ್ತು. ಈ ಚಿತ್ರದ ತಾರೆಯರು ಈಗ ಒಂದೇ ಚಿತ್ರದಲ್ಲಿ ಒಂದಾಗಿದ್ದಾರೆ. ಅದುವೇ ಚಮಕ್. ಅದರಲ್ಲೂ ಗೋಲ್ಡನ್ ಗಣಿಗೆ ಮತ್ತು ಕಿರಿಕ್ ರಷ್ಮಿಕಾಗೆ ಡಿಸೆಂಬರ್ 29 ಲಕ್ಕಿ ಡೇ. ನಾಳೆ ಚಮಕ್ ಚಿತ್ರ ರಿಲೀಸ್ ಆಗುತ್ತಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಿರಿಕ್ ರಷ್ಮಿಕಾ ಮೊದಲ ಭಾರಿಗೆ ಒಟ್ಟಿಗೆ ಅಭಿನಯಿಸಿರೋ ಈ ಚಿತ್ರದ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ. ಜುಡಾ ಸ್ಯಾಂಡಿ ಸಂಗೀತದ ತಾಜಾ ಮೋಡಿ ಮಾಡಿದ್ದು, ಟಿ.ಆರ್.ಚಂದ್ರಶೇಖರ್ ಸಿನಿಮಾಕ್ಕೆ ಹಣ ಹೂಡಿದ್ದಾರೆ. ರಾಜ್ಯದ 232 ಥಿಯೇಟರ್ ನಲ್ಲಿ ಚಮಕ್ ರಿಲೀಸ್ ಆಗುತ್ತಿದೆ. ಹೊರ ರಾಜ್ಯದ 64 ಥಿಯೇಟರ್​ ನಲ್ಲೂ ಚಮಕ್ ಬರ್ತಿದೆ. ಇನ್ನು ವಿದೇಶದ 100 ಥಿಯೇಟರ್'ನಲ್ಲೂ ಚಮಕ್ ತನ್ನ ಚಮಕ್ ಕೊಡಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred