ದಕ್ಷಿಣ ಭಾರತದ ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಈ ವರ್ಷ ಸಾಕಷ್ಟು ಮೋಡಿ ಮಾಡಿತ್ತು. 'ಗೀತ ಗೋವಿಂದಂ' ಚಿತ್ರದಲ್ಲಿ ಈ ಇಬ್ಬರ ನಟನೆ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. ಅದರಲ್ಲಿಯೂ ಇವರಿಬ್ಬರ ಇಂಟಿಮೇಟೆಡ್ ಸೀನ್‌ನಿಂದಾನೇ ರಶ್ಮಿಕಾ-ರಕ್ಷಿತ್ ನಿಶ್ಚಿತಾರ್ಥ ಬ್ರೇಕ್ ಅಪ್ ಆಯಿತೆಂಬ ಗಾಳಿ ಸುದ್ದಿಯೂ ಹರಿದಾಡಿತ್ತು.

ಆಮೇಲೆ ದೇವರಕೊಂಡ ರಕ್ಷಿತ್ ಅವರನ್ನು ಹೊಗಳಿ, ಸಂಬಂಧ ಸರಿ ಮಾಡಲು ತಾವು ಸಿದ್ಧವಾಗಿರುವುದಾಗಿಯೂ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದರು. ಇದೀಗ ರಶ್ಮಿಕಾರನ್ನು ವಿಜಯ್ ಹೊಗಳಿದ್ದು ಮತ್ತೆ ಸುದ್ದಿಯಾಗುತ್ತಿದೆ.

ರಶ್ಮಿಕಾ ಮಂದಣ್ಣ ಯಶಸ್ಸಿಗೆ ಈ 5 ಘಟನೆಗಳೇ ಕಾರಣ!

'ಕಾಮ್ರೇಡ್ ರಶ್ಮಿಕಾ, ಕಂಗ್ರಾಜ್ಯುಲೇಷನ್ಸ್. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಆದ ಚೈಲ್ಡ್ ಆಫ್ ದಿ ಇಯರ್ ನಾಯಕಿ ನೀವು. ಅಷ್ಟೇ ಅಲ್ಲದೆ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಚಿತ್ರದಲ್ಲಿ ನಿಮ್ಮದೇ ಪಾರುಪತ್ಯ. ಹಾಡುಗಳಲ್ಲಿ 1, 4 ಹಾಗೂ 9ನೇ ಸ್ಥಾನ ಪಡೆದಿವೆ. ನನಗೆ ಪಾರ್ಟಿ ಬೇಕು' ಎಂದು ಕೇಳಿ ಕೊಂಡಿದ್ದಾರೆ.

ಕಿಸ್' ನಿಂದಲೇ 'ಕಿರಿಕ್' ಜೋಡಿ ಬ್ರೇಕ್ ಅಪ್ ಆಯ್ತಾ ? ಸತ್ಯ ಬಿಚ್ಚಿಟ್ಟ ದೇವರಕೊಂಡ

ಮೂರು ಕೋಟಿ ವೆಚ್ಚದ ಸಿನಿಮಾ ಚಲೋ ಒಂದು ರೀತಿ ಹೆಸರು ತಂದುಕೊಟ್ಟರೆ, ಗೀತಾ ಗೊವಿಂದಂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 127.8 ಕೋಟಿ ಗಳಿಸಿ, ಹೆಸರು ಮಾಡಿತ್ತು.