ಸಲ್ಮಾನ್ ಖಾನ್ ನಟನೆಯ  ಬಹುನಿರೀಕ್ಷಿತ  ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.  ಜಿಂದಾ ಹೈ ಟೈಗರ್ ಬಾಲಿವುಡ್'ನಲ್ಲಿ ಸೆನ್ಸೇಷನಲ್  ಕ್ರಿಯೇಟ್ ಮಾಡಿರೋ ಚಿತ್ರ. ಮಜಲ್ ಮ್ಯಾನ್ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಬಹಳ ವರ್ಷಗಳ ನಂತರ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರೋ ಎಕ್ಸ್ ಪೆಕ್ಟೆಡ್ ಸಿನಿಮಾ.  ಚಿತ್ರದ ಪೋಸ್ಟರ್'ಗಳಿಂದ ಬಾಲಿವುಡ್ ಅಲ್ಲದೆ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಟೈಗರ್ ಜಿಂದಾ ಹೈ ಚಿತ್ರದ ಆಫೀಶಿಯಲ್ ಟ್ರೈಲರ್ ರಿವೀಲ್ ಆಗಿದೆ.

ಮುಂಬೈ (ನ.07): ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಜಿಂದಾ ಹೈ ಟೈಗರ್ ಬಾಲಿವುಡ್'ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ಚಿತ್ರ. ಮಜಲ್ ಮ್ಯಾನ್ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಬಹಳ ವರ್ಷಗಳ ನಂತರ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರೋ ಎಕ್ಸ್ ಪೆಕ್ಟೆಡ್ ಸಿನಿಮಾ. ಚಿತ್ರದ ಪೋಸ್ಟರ್'ಗಳಿಂದ ಬಾಲಿವುಡ್ ಅಲ್ಲದೆ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಟೈಗರ್ ಜಿಂದಾ ಹೈ ಚಿತ್ರದ ಆಫೀಶಿಯಲ್ ಟ್ರೈಲರ್ ರಿವೀಲ್ ಆಗಿದೆ.

ಸುಲ್ತಾನ್ ಸಿನಿಮಾಕ್ಕಾಗಿ ತೂಕವನ್ನ ಹೆಚ್ಚಿಸಿಕೊಂಡಿದ್ದ ಸಲ್ಮಾನ್ ಖಾನ್, 18ರಿಂದ 20 ಕೆಜಿ ತೂಕ ಇಳಿಸಿಕೊಂಡು ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಇನ್ನಷ್ಟು ಫಿಟ್ ಅಂಡ್ ಫೈನಾಗಿ ಕಾಣಿಸಿಕೊಳ್ಳುತ್ತಿದ್ದು , ಭರ್ಜರಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕತ್ರೀನಾ ಕೂಡ ಫಸ್ಟ್ ಟೈಮ್ ಥ್ರಿಲ್ಲಿಂಗ್ ಸ್ಟಂಟ್ ಗಳನ್ನ ಮಾಡಿರೋದು ಈ ಚಿತ್ರದ ಪ್ಲಸ್ ಪಾಯಿಂಟ್.

ಇರಾಕ್ ಭಯೋತ್ಪಾದನೆಯ ರಿಯಲ್ ಕಥೆ ಆಧರಿಸಿರೋ ಟೈಗರ್ ಜಿಂದಾ ಹೈ ಟ್ರೈಲರ್, ಯೂ ಟ್ಯೂಬ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಸಲ್ಮಾನ್ ಖಾನ್ ಹಾರ್ಸ್​ ರೈಡಿಂಗ್ ಹಾಗೂ ಬರೋಬ್ಬರಿ 30 ಕೆಜಿ ತೂಕದ ಗನ್ ಹಿಡಿದು ಸಲ್ಲು ಫೈರಿಂಗ್ ಮಾಡುವ ಶೈಲಿ ನಿಜಕ್ಕೂ ಥ್ರಿಲ್ ಅನ್ನಿಸುತ್ತದೆ. ನಿರ್ದೇಶಕ ಅಬ್ಬಾಸ್ ಜಾಫರ್ ಅದ್ದೂರಿಯಾಗಿ ಇಟಲಿ, ಸ್ಫೈನ್, ಇರಾಕ್ ನಲ್ಲಿ ಶೂಟಿಂಗ್ ಮಾಡಿದ್ದಾರೆ. ವರ್ಷ್ಯಾಂತ್ಯದ ಡಿಸೆಂಬರ್ 22 ಕ್ಕೆ ಟೈಗರ್ ಜಿಂದಾ ಹೈ ತೆರೆ ಕಾಣಲಿದೆ.