ಆ್ಯಕ್ಷನ್ ಸ್ಟಂಟ್‌ಗಳನ್ನು ಒಳಗೊಂಡಿರುವ ಟೈಗರ್ ಜಿಂದಾ ಹೈ ಚಿತ್ರವು 100 ಕೋಟಿ ಕ್ಲಬ್ ಪ್ರವೇಶಿಸಿದ್ದಲ್ಲಿ, 100 ಕೋಟಿ ರು. ಕ್ಲಬ್ ಪ್ರವೇಶಿಸಿದ ಸಲ್ಮಾನ್ ಅಭಿನಯದ 12ನೇ ಚಿತ್ರವಾಗಲಿದೆ

ನವದೆಹಲಿ(ಡಿ.28): ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರವು 6 ದಿನಗಳಲ್ಲಿ 200 ಕೋಟಿ ರು. ಬಾಚಿ ದಾಖಲೆ ನಿರ್ಮಿಸಿದೆ.

ಅಲ್ಲದೆ, ಮುಂದಿನ ವಾರದಲ್ಲಿ ಯಾವುದೇ ದೊಡ್ಡ ಚಿತ್ರ ತೆರೆ ಕಾಣದಿರುವುದರಿಂದ ಈ ಆದಾಯದ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಆ್ಯಕ್ಷನ್ ಸ್ಟಂಟ್‌ಗಳನ್ನು ಒಳಗೊಂಡಿರುವ ಟೈಗರ್ ಜಿಂದಾ ಹೈ ಚಿತ್ರವು 100 ಕೋಟಿ ಕ್ಲಬ್ ಪ್ರವೇಶಿಸಿದ್ದಲ್ಲಿ, 100 ಕೋಟಿ ರು. ಕ್ಲಬ್ ಪ್ರವೇಶಿಸಿದ ಸಲ್ಮಾನ್ ಅಭಿನಯದ 12ನೇ ಚಿತ್ರವಾಗಲಿದೆ. ಈ ಹಿಂದೆ ಸಲ್ಮಾನ್ ಅವರ ಭಜರಂಗಿ ಭಾಯ್‌ಜಾನ್ 320.34 ಕೋಟಿ ರು. ಗಳಿಸಿದರೆ, ಸುಲ್ತಾನ್ 300.45 ಕೋಟಿ ರು. ಗಳಿಸಿತ್ತು. ಈ ಎರಡೂ ಚಿತ್ರಗಳ ದಾಖಲೆಯನ್ನು ಟೈಗರ್ ಜಿಂದಾ ಹೈ ಚಿತ್ರ ಮುರಿಯಲಿದೆ ಎನ್ನಲಾಗಿದೆ.