ದಿಶಾನಿ ಪಟಾನಿ ಮೇಲೆ ಟೈಗರ್‌ನ ಈ ಮುನಿಸು ತರವೇ?

First Published 15, Jun 2018, 4:10 PM IST
Tiger Shroff disappointment towards girlfriend Disha Patani
Highlights

ಬೀಚ್‌ನಲ್ಲಿರೋ ಬಿಕನಿ ಚಿತ್ರ ಹಾಕಿಯೇ ಫೇಮಸ್ ಆಗಲು ಯತ್ನಿಸುತ್ತಿರುವ ದಿಶಾ ಪಟಾನಿ, ತನ್ನಿಷ್ಟದಂತೆ ತಾನು ಬದುಕುವೆ ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಇದು ಪ್ರಿಯಕರ ಟೈಗರ್ ಶ್ರಾಫ್‌ ಕೋಪ ತರಿಸುತ್ತಿದೆಯಂತೆ!

ಬಿಕಿನಿ ಚಿತ್ರದ ಮೂಲಕ ಜನರಿಗೆ ಫಿಟ್‌ನೆಸ್ ಗೋಲ್ ಕೊಟ್ಟದ್ದ ದಿಶಾನಿ, ಕೆಲವೇ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು. ಎಂ.ಎಸ್.ಧೋನಿ ಚಿತ್ರದ ಮೂಲಕವೇ ಅಭಿಮಾನಿಗಳ ಮನಸೂರೆಗೊಂಡ ಈ ನಟಿ, ಚಿತ್ರಗಳಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಮಾಡಿದ್ದೇ ಹೆಚ್ಚು.

ಭಾಗಿ-2 ಚಿತ್ರದಲ್ಲಿ ಟೈಗರ್ ಶ್ರಾಫ್‌ನೊಂದಿಗೆ ತೆರೆ ಹಂಚಿಕೊಂಡ ದಿಶಾ, ಜಾಹೀರಾತು ಹಾಗೂ ಸಿನಿಮಾ ಕ್ಷೇತ್ರಗಳೆರಡರಲ್ಲಿಯೂ ತನ್ನದೇ ಛಾಪು ಮೂಡಿಸಿದ್ದಾರೆ. ಇದೀಗ 'ಅಲಿ ಅಬ್ಬಾಸ್ ಜಾಫರ್' ಚಿತ್ರದಲ್ಲಿ ದಿಶಾ ಸಲ್ಮಾನ್ ಖಾನ್ ತಂಗಿಯಾಗಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 

ಮಾಡೆಲ್ ಕ್ಷೇತ್ರದೆಡೆಗೆ ಹೆಚ್ಚು ಗಮನ ಹರಿಸುತ್ತಿರುವ ದಿಶಾ ಬಗ್ಗೆ ಅಸಮಾಧಾನಗೊಂಡಿರುವ ಟೈಗರ್, ಚಿತ್ರರಂಗವನ್ನು ಇಗ್ನೋರ್ ಮಾಡುತ್ತಿದ್ದಾರೆಂಬುವುದು ಟೈಗರ್ ಆರೋಪ. ಇನ್ನಾದರೂ ಸಿನಿಮಾ ಆಡಿಶನ್‌ಗೆ ಹೋಗಲಿ ಎಂಬುವುದು ಟೈಗರ್ ಇರಾದೆ.

ತಾವಿಬ್ಬರು ಸ್ನೇಹಿರತರೆಂದೇ ಹೇಳಿಕೊಂಡು ತಿರುಗುತ್ತಿರುವ ಈ ಜೋಡಿ ಹಕ್ಕಿಯ ವಿಷಯ ಏನೆಂಬುವುದೇ ಅರ್ಥವಾಗುತ್ತಿಲ್ಲ. ಬರೀ ಸ್ನೇಹಿತರಾದರೆ, ಇಷ್ಟೆಲ್ಲಾ ಪೊಸೆಸಿವ್‌ನೆಸ್, ಕಾಳಜಿ ಯಾಕಪ್ಪಾ?

loader