Asianet Suvarna News Asianet Suvarna News

ಇದು ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿಯ ಫಸ್ಟ್ ಲುಕ್

ಈಗಾಗಲೇ ಬಿಜಾಪುರದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಹೇಗೆ ಕಾಣಿಸುತ್ತಾರೆ ಅನ್ನುವುದನ್ನು ಸಹೃದಯ ಪ್ರೇಕ್ಷಕರಿಗೆ ತೋರಿಸಿ ಕೊಟ್ಟಿದೆ. ಇಡೀ ಚಿತ್ರ ಎಂಭತ್ತರ ದಶಕದ ವಾತಾವರಣದಲ್ಲಿ ನಡೆಯಲಿರುವುದರಿಂದ ಈ ಎಲ್ಲಾ ಪಾತ್ರಗಳ ಲುಕ್ ಕೂಡ ಡಿಫರೆಂಟಾಗಿ ಇರಲಿದೆ

This is Srimannarayana First Look of Rakshit Shetty

ಕೃಪೆ: ಕನ್ನಡಪ್ರಭ

ಬೆಂಗಳೂರು[ಜೂ.09]: ಈ ಚಿತ್ರದಲ್ಲಿ ನನ್ನದು ಟಿಪಿಕಲ್ ಪೊಲೀಸ್ ಪಾತ್ರ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣ ಚಿತ್ರೀಕರಣ ಮಾಡಿರುವುದು ನಿಜ. ಹಾಗಂತ ಇಡೀ ಕತೆ ಆ ಭಾಗದ್ದಲ್ಲ. ಚಿತ್ರದಲ್ಲಿ ಒಂದು ಪ್ರದೇಶಕ್ಕೆ ಸೀಮಿತ ಎನ್ನುವಂತಹ ಭಾಷೆ ಇಲ್ಲ. ಯೂನಿಕ್ ಭಾಷೆಯನ್ನು ಇಲ್ಲಿ ಬಳಸಿದ್ದೇವೆ. ಚಿತ್ರದ ಪೋಸ್ಟರ್‌ಗಳನ್ನು ನೋಡಿದಾಗ ನನಗೇ ಥ್ರಿಲ್ಲಾಗುತ್ತಿದೆ. ಈ ಚಿತ್ರದ ಲುಕ್‌ಗಳ ಬಗ್ಗೆ ಯಾವ ರೀತಿ ಪ್ರತಿ ಕ್ರಿಯೆಗಳನ್ನು ಬರಬಹುದೆಂದು ನಾನೇ ಕುತೂಹಲದಿಂದ ಕಾಯುತ್ತಿದ್ದೇನೆ. ಮುಕ್ಕಾಲು ಪಾಲು ಚಿತ್ರೀಕರಣ ಹೊರ ಜಿಲ್ಲೆಗಳಲ್ಲೇ ಮಾಡಿದ್ದೇವೆ. ಬೃಹತ್ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ಮಾಡಿದ್ದೇವೆ. ‘ಕಿರಿಕ್ ಪಾರ್ಟಿ’ಯ ಅರ್ಧ ತಂಡವೇ ಮತ್ತೆ ನನ್ನೊಂದಿಗೆ ನಟಿಸುತ್ತಿದ್ದಾರೆ. ಎಲ್ಲರೂ ಸೇರಿ ಪ್ರೀತಿಯಿಂದ ಮಾಡುತ್ತಿರುವ ಸಿನಿಮಾ ಇದು. ನಾವು ಇಲ್ಲಿಯವರೆಗೂ ಏನು ಮಾಡಿದ್ದೇವೆ ಎಂಬುದನ್ನು ಹೇಳುವುದಕ್ಕಾಗಿಯೇ ಚಿತ್ರದ ಟೀಸರ್ ಹಾಗೂ ಫಸ್ಟ್‌ಲುಕ್ ಬಿಡುಗಡೆ ಮಾಡಿದ್ದೇವೆ- ರಕ್ಷಿತ್ ಶೆಟ್ಟಿ
* ಅವನು ಎಲ್ಲರಂತೆ ಇರದ ಒಬ್ಬ ಪೊಲೀಸ್. ಸಿನಿಮಾದಲ್ಲಿ ನಗಿಸುತ್ತಲೇ ಇರುತ್ತಾನೆ.
* ಅವನಿಗೆ ಹೇಳಿದ ಕೆಲಸ ಬಿಟ್ಟು ಬೇರೆಯದೆಲ್ಲವೂ ಮಾಡುತ್ತಾನೆ.
* ಅವನೊಂದು ಮಹತ್ತರ ಕೆಲಸವನ್ನು ಮನಸ್ಸಲ್ಲಿಟ್ಟುಕೊಂಡು ಅದಕ್ಕಾಗಿ ಬದುಕುತ್ತಿರುತ್ತಾನೆ. ಅದು ಗೊತ್ತಾಗುವುದೇ ತುಂಬಾ ತಡವಾಗಿ.
* ಎಲ್ಲರ ಕಾಲೆಳೆದುಕೊಂಡು, ಡಿಫರೆಂಟಾಗಿ ಡೈಲಾಗ್ ಹೇಳುತ್ತಾ, ತಮಾಷೆ ಮಾಡಿಕೊಂಡೇ ಬದುಕುವ ಅವನೇ ಶ್ರೀಮನ್ನಾರಾಯಣ.
ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ನಾಯಕ ನಾರಾಯಣನ ಬಗ್ಗೆ ಇಷ್ಟು ಮಾಹಿತಿ ನೀಡಿದ್ದು ನಿರ್ದೇಶಕ ಸಚಿನ್. 
ಈಗಾಗಲೇ ಬಿಜಾಪುರದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಹೇಗೆ ಕಾಣಿಸುತ್ತಾರೆ ಅನ್ನುವುದನ್ನು ಸಹೃದಯ ಪ್ರೇಕ್ಷಕರಿಗೆ ತೋರಿಸಿ ಕೊಟ್ಟಿದೆ. ಇಡೀ ಚಿತ್ರ ಎಂಭತ್ತರ ದಶಕದ ವಾತಾವರಣದಲ್ಲಿ ನಡೆಯಲಿರುವುದರಿಂದ ಈ ಎಲ್ಲಾ ಪಾತ್ರಗಳ ಲುಕ್ ಕೂಡ ಡಿಫರೆಂಟಾಗಿ ಇರಲಿದೆ
ಎನ್ನುತ್ತಾರೆ ನಿರ್ದೇಶಕ ಸಚಿನ್.
ಶ್ರೀಮನ್ನಾರಾಯಣನ ಪ್ರಪಂಚ
* ಚಿತ್ರಕ್ಕೆ ಈಗಾಗಲೇ ಮೂರು ಹಂತದಲ್ಲಿ 33 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನೂ 70 ದಿನಗಳ ಚಿತ್ರೀಕರಣ ಬಾಕಿ ಇದೆ.
* ಹೊರಾಂಗಣ ಚಿತ್ರೀಕರಣ ಮುಗಿದಿದ್ದು, ಇನ್ನುಳಿದ ಭಾಗವನ್ನು ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುವುದು. ಇದಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿದೆ.
* ಸ್ವಲ್ಪ ಭಾಗ ಕಾಡಿನಲ್ಲಿ ಚಿತ್ರೀಕರಣಗೊಳ್ಳಲಿದ್ದು, ಕಾಡಿನ ಸೆಟ್ ಹಾಕಲಾಗುತ್ತದೆ.
 

Follow Us:
Download App:
  • android
  • ios