ಕಿಚ್ಚ ಸುದೀಪ್'ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಮಕ್ಕಳಿಂದ ಹಿಡಿದು, ಅಜ್ಜ, ಅಜ್ಜಿಯರಿಗೂ ಕಿಚ್ಚ ಅಚ್ಚುಮೆಚ್ಚು. ಅದರಂತೆ ಈ ಅಜ್ಜಿಗೆ ಸುದೀಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಅಂತೆ. 

ಬೆಂಗಳೂರು (ಫೆ.03): ಕಿಚ್ಚ ಸುದೀಪ್'ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಮಕ್ಕಳಿಂದ ಹಿಡಿದು, ಅಜ್ಜ, ಅಜ್ಜಿಯರಿಗೂ ಕಿಚ್ಚ ಅಚ್ಚುಮೆಚ್ಚು. ಅದರಂತೆ ಈ ಅಜ್ಜಿಗೆ ಸುದೀಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಅಂತೆ. 

ಸುದೀಪ್ ಸುತ್ತ ಒಂದು ಅಜ್ಜಿಯ ಕಥೆ ಇದೆ. ಆ ಅಜ್ಜಿಗೆ ಈಗ 82 ವರ್ಷ. ಹೆಸರು ಪದ್ಮಾ. ಕಿಚ್ಚ ಅಂದ್ರೆ ಈ ಅಜ್ಜಿಗೆ ತುಂಬಾ ಇಷ್ಟ.ಅದರಲ್ಲೂ ಕಿಚ್ಚನ ನಿರೂಪಣೆ ಬಲು ಇಷ್ಟ. ಬಿಗ್'ಬಾಸ್'ನ ತಪ್ಪದೇ ನೋಡ್ತಾರೆ. ಅಜ್ಜಿಯ ಪ್ರೀತಿಗೆ ಕಿಚ್ಚ ಮನ ಸೋತಿದ್ದಾರೆ. ಅಜ್ಜಿಯ ಮಮತೆ ತುಂಬಿದ,ಪ್ರೀತಿ ತುಂಬಿದ ಮಾತಿಗೆ ಮನಸಾರೆ ಧನ್ಯವಾದ ಹೇಳಿದ್ದಾರೆ.ಅದನ್ನ ತಮ್ಮ ಟ್ವಿಟರ್ ಅಕೌಂಟ್' ನಲ್ಲೂ ಬರೆದುಕೊಂಡಿದ್ದಾರೆ.

Scroll to load tweet…

ಅಜ್ಜಿ ಪದ್ಮಾ ಸುದೀಪ್ ಫ್ಯಾಮಿಲಿಯನ್ನ ಹರೆಸಿದ್ದಾರೆ. ಸುದೀಪ್ ಶ್ರಮವನ್ನೂ ಕೊಂಡಾಡಿದ್ದಾರೆ. ಬೆಂಗಳೂರಿನ ಲಕ್ಷ್ಮೀ ಚಿತ್ರಮಂದಿರದ ಹಿಂಭಾಗದಲ್ಲಿರೋ ತಮ್ಮ ಮನೆಗೂ ಆಹ್ವಾನಿಸಿದ್ದಾರೆ. ಅದನ್ನ ತಳ್ಳಿ ಹಾಕದ ಸುದೀಪ್, ಮನೆಗೆ ಬರುವುದಾಗಿ ಹೇಳಿದ್ದಾರೆ.