ಕಿಚ್ಚ ಸುದೀಪ್'ಗಾಗಿ ಓರ್ವ ನಟಿ ತನ್ನ ಸ್ವಂತ ಹೆಸರನ್ನೇ ಬದಲಾಯಿಸಿಕೊಂಡಿದ್ದಾರಂತೆ!
ಬೆಂಗಳೂರು (ಜ.02): ಕಿಚ್ಚ ಸುದೀಪ್'ಗಾಗಿ ಓರ್ವ ನಟಿ ತನ್ನ ಸ್ವಂತ ಹೆಸರನ್ನೇ ಬದಲಾಯಿಸಿಕೊಂಡಿದ್ದಾರಂತೆ!
ಸದ್ಯ ಧೈರ್ಯ ಚಿತ್ರದ ನಟಿ, ನಾಗಕನ್ನಿಕೆ ಧಾರವಾಹಿಯಲ್ಲಿ ನಟಿಸುತ್ತಿರುವ ನಟಿ ಅಧಿತಿಯ ಹೆಸರು ಸುದೀಪ್ ಅವರಿಂದಲೇ ಬದಲಾಗಿದೆಯಂತೆ. ಹೇಗೆ ಅಂತೀರಾ? ಅಧಿತಿಯ ಮೂಲ ಹೆಸರು 'ಸುದೀಪನಾ'. ಆದ್ದರಿಂದ ಕಾಲೇಜಿನಲ್ಲಿ ಎಲ್ಲರೂ ಅಧಿತಿಯವರನ್ನು ಸುದೀಪ್, ಕಿಚ್ಚ ಎಂದೆಲ್ಲಾ ರೇಗಿಸುತ್ತಿದ್ದರಂತೆ. ಅದಕ್ಕಾಗಿ ಬಳಿಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಳಿಕ ಅವರು ತಮ್ಮ ಹೆಸರನ್ನು ಅಧಿತಿ ಎಂದು ಬದಲಾಯಿಸಿಕೊಂಡ್ರಂತೆ. ಇದನ್ನು ನಟಿ ಅಧಿತಿಯೇ ಹೇಳಿದ್ದಾರೆ.
ಭಾನುವಾರ ನಡೆದ ಬಿಗ್'ಬಾಸ್ ಮನೆಯ ಕಿಚ್ಚನ ಕಿಚನ್‌ನಲ್ಲಿ ಅವರು ಹಾಜರಿದ್ದರು. ಈ ವೇಳೆ ಕೊಂಚ ಹರಟೆ, ಮಾತು ಜೊತೆ ಜೊತೆಗೆ ಅಡುಗೆ ಕೆಲಸ ನಡೆಯಿತು. ಮಾತಿನ ಮಧ್ಯೆ ತಮ್ಮ ಹೆಸರು ಬದಲಾಗಿದ್ದು, ಅದಕ್ಕೆ ಕಾರಣ ನೀವೇ ಎಂಬುದನ್ನು ಕಿಚ್ಚನ ಎದುರು ಹೇಳಿಕೊಂಡರು.
