ಆಡಿಷನ್ ವೇಳೆ ನಟನೆಯಲ್ಲಿ ತೊಡಗಿದ್ದಾಗಲೇ ಹೃದಯಾಘಾತವಾಗಿ ಸ್ಥಳದಲ್ಲಿಯೇ ನಿಧನರಾಗಿದ್ದಾರೆ.

ಬಳ್ಳಾರಿ(ಡಿ.06): ನಗರದ ಖ್ಯಾತ ರಂಗಕರ್ಮಿ ‘ಬಳ್ಳಾರಿಯ ರಂಗಶಂಕರ’ ಎಂಬ ಖ್ಯಾತಿಯ ಶಿವಶಂಕರ ನಾಯ್ಡು (55) ಅವರು ವೇದಿಕೆಯಲ್ಲಿ ನಟನಾನಿರತರಾಗಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ.

ಸೋಮವಾರ ರಾತ್ರಿ ಬೆಂಗಳೂರಿನ ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಆಡಿಷನ್ ವೇಳೆ ನಟನೆಯಲ್ಲಿ ತೊಡಗಿದ್ದಾಗಲೇ ಹೃದಯಾಘಾತವಾಗಿ ಸ್ಥಳದಲ್ಲಿಯೇ ನಿಧನರಾಗಿದ್ದಾರೆ. ನಗರದ ಎಸ್‌ಆರ್‌ಆರ್ ಚಿತ್ರ ಮಂದಿರ ಬಳಿಯ ಶಿವಶಂಕರ್ ನಾಯ್ಡು ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಮಧ್ಯಾಹ್ನ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಶಿವಶಂಕರ್ ಅವರು ಸಾವಿರಾರು ಬೀದಿ ನಾಟಕ ಪ್ರದರ್ಶನ ನೀಡಿದ್ದರು.