ಕರೀನಾ ಕಪೂರ್ ಫೋನ್ ನಂಬರ್ ಪಡೆಯಲು ಅಭಿಮಾನಿ ನಟಿಯ ಆದಾಯ ತೆರಿಗೆ ಖಾತೆಯನ್ನೇ ಹ್ಯಾಕ್ ಮಾಡಿದ್ದ. ಬಂಧಿತನನ್ನು ಮನೀಷ್ ತಿವಾರಿ ಅಂತ ಗುರುತಿಸಲಾಗಿದ್ದು, ಕರೀನಾರೊಂದಿಗೆ ಮಾತನಾಡುವ ಸಲುವಾಗಿ ತಾನು ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದ್ದಾನೆ.

ಮುಂಬೈ(ಜ.04): ಬಾಲಿವುಡ್ ನಟಿ ಕರೀನಾ ಕಪೂರ್ ಅವರ ಕಟ್ಟಾ ಅಭಿಮಾನಿಯೊಬ್ಬ ಆಕೆಯ ಫೋನ್ ನಂಬರ್ ಪಡೆದು ಕೊಳ್ಳುವ ಹಂಬಲದಲ್ಲಿ ಜೈಲುಪಾಲಾಗಿದ್ದಾನೆ.

ಕರೀನಾ ಕಪೂರ್ ಫೋನ್ ನಂಬರ್ ಪಡೆಯಲು ಅಭಿಮಾನಿ ನಟಿಯ ಆದಾಯ ತೆರಿಗೆ ಖಾತೆಯನ್ನೇ ಹ್ಯಾಕ್ ಮಾಡಿದ್ದ. ಬಂಧಿತನನ್ನು ಮನೀಷ್ ತಿವಾರಿ ಅಂತ ಗುರುತಿಸಲಾಗಿದ್ದು, ಕರೀನಾರೊಂದಿಗೆ ಮಾತನಾಡುವ ಸಲುವಾಗಿ ತಾನು ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದ್ದಾನೆ.

ಆನ್ ಲೈನ್ ನಲ್ಲಿ ಕರೀನಾ ಕಪೂರ್ ಅವರ ಪ್ಯಾನ್ ನಂಬರ್ ಪಡೆದು. ಅದರ ಮೂಲಕ ವಿವಿಧ ಐಪಿ ಅಡ್ರೆಸ್ ಗಳ ಮೂಲಕ ಕರೀನಾ ಕಪೂರ್ ಅವರ 2016 ಮತ್ತು 2017ನೇ ಸಾಲಿನ ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿದ್ದ ಅಂತ ತಿಳಿದುಬಂದಿದೆ.