ಬೆಂಗಳೂರಿನ ಫ್ಲಾಶ್ ಫ್ರೇಮ್ ವಿಶುವಲ್ಸ್ ಅಕಾಡೆಮಿ ನಿರ್ಮಿಸಿರುವ 'ನಮ್ಮ ಬೆಂಗಳುರು ಸಖತ್ ಕೂಲು' ಹಾಡು ಸೊಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದಿತಿ ಸೋನಿ ಹಾಗೂ ಕೀರ್ತಿ ಕುಮಾರ್ ರಚಿಸಿರುವ ಈ ಆಲ್ಬಂ ಬೆಂಗಳೂರಿನ ವಿಹಾರ ಮಾಡಿಸುವುದಲ್ಲದೇ. ಹಳೇ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ.  ಬಂಟಿ ಲಕ್ಷ್ಮಿಕಾಂತ್ ಬರೆದಿರುವ ಹಾಡನ್ನು ಏ.ಟಿ. ಭಗತ್ ಹಾಡಿದ್ದಾರೆ. ಏ.ಟಿ. ರಾಮ್ ಸಂಗೀತ ನೀಡಿದ್ದಾರೆ. ವಿಡಿಯೋವನ್ನು ಈಗಾಗಲೇ ಏಳುವರೆ ಲಕ್ಷ ಮಂದಿ ವೀಕ್ಷಿಸಿದ್ದಾರಲ್ಲದೇ, ಸುಮಾರು 6300 ಮಂದಿ ಶೇರ್ ಮಾಡಿದ್ದಾರೆ.