ಹಾಲಿವುಡ್ ಸಿನಿಮಾ ‘ಅನ್ನಾಬೆಲ್ಲೆ ಕಮ್ಸ್ ಹೋಮ್’ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದ ವ್ಯಕ್ತಿ ಅಲ್ಲಿಯೇ ಮೃತಪಟ್ಟಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. 

ಕಾಲೇಜು ದಿನಗಳಲ್ಲಿ ಗರ್ಲ್‌ಫ್ರೆಂಡ್‌ ಇಂಪ್ರೆಸ್ ಮಾಡಲು ಸುದೀಪ್ ಹೀಗ್ಮಾಡ್ತಾ ಇದ್ರಂತೆ!

77 ವರ್ಷದ ಬರ್ನಡ್ ಚನ್ನಿಂಗ್ ಎಂಬ ಹಿರಿಯ ವ್ಯಕ್ತಿ ಅನ್ನಾಬೆಲ್ಲೆ ಸಿನಿಮಾ ನೋಡಲು ಥೈಲ್ಯಾಂಡ್ ನ ಪಟ್ಟಯ್ಯ ಶಾಪಿಂಗ್ ಮಾಲ್ ಗೆ ತೆರಳಿದ್ದರು. ಸಿನಿಮಾ ಮುಗಿಸಿ ಎಲ್ಲರೂ ಎದ್ದು ಹೊರಟರೂ ಇವರು ಎದ್ದಿಲ್ಲ. ಆಗ ಪಕ್ಕದಲ್ಲಿ ಇದ್ದ ಮಹಿಳೆ ಆ ವ್ಯಕ್ತಿಯನ್ನು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.

‘ಅನ್ನಾಬೆಲ್ಲೆ’ ಸಿನಿಮಾ ಜೂನ್ 26 ರಂದು ತೆರೆ ಕಂಡಿತ್ತು.