ಅತ್ಯಂತ ಮತ್ತು ಬಹುನಿರೀಕ್ಷಿತ ತಾರಕ್ ಚಿತ್ರದ ಟ್ರೇಲರ್ ಈ ಗುರುವಾರ (21st September 2017) ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ. ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ "ತಾರಕ್" ಸಿನಿಮಾದ ಟ್ರೇಲರ್ ನಾಳೆ (ಗುರುವಾರ, 21 ಸೆಪ್ಟಂಬರ್) ಬಿಡುಗಡೆಯಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಸಂಜೆ 6 ಗಂಟೆಯಿಂದ ತಾರಕ್'ನ ಪ್ರಪ್ರಥಮ ಟ್ರೇಲರ್ ಯೂಟ್ಯೂಬ್'ನಲ್ಲಿ ಸಿಗಲಿದೆ.

ದುಷ್ಯಂತ್ ನಿರ್ಮಿಸಿರುವ ಹಾಗೂ ಮಿಲನ ಪ್ರಕಾಶ್ ನಿರ್ದೇಶಿಸಿರುವ "ತಾರಕ್" ಸಿನಿಮಾ ಈ ವರ್ಷದ ಮೆಗಾ ಸಿನಿಮಾಗಳಲ್ಲೊಂದು. ಅರ್ಜುನ್ ಜನ್ಯಾ ಕಂಪೋಸ್ ಮಾಡಿರುವ ಎಲ್ಲಾ 6 ಹಾಡುಗಳೂ ಜನಪ್ರಿಯವಾಗಿವೆ. ವ್ಯಾಸರಾಜ್ ಸೋಸಲೆ ಹಾಡಿರುವ "ಬಾ ಬಾರೋ ಗೆಳೆಯ" ಹಾಡಂತೂ ಬಹಳಷ್ಟು ಅಭಿಮಾನಿಗಳ ಮನಸೂರೆಗೊಂಡಿದೆ.

ದಾಸ ದರ್ಶನ್'ಗೆ ಜೋಡಿಯಾಗಿ ಶೃತಿ ಹರಿಹರನ್ ಮತ್ತು ಕಿರಿಕ್ ಹುಡುಗಿ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ. ದರ್ಶನ್ ಅವರ 49ನೇ ಸಿನಿಮಾವಾಗಿರುವ "ತಾರಕ್" ಇದೇ ಸೆಪ್ಟೆಂಬರ್ 29ರಂದು ಥಿಯೇಟರ್'ಗಳಲ್ಲಿ ರಿಲೀಸ್ ಆಗುತ್ತಿದೆ.