ಟಾಲಿವುಡ್'ನ ಸುಂದರಿ ತಾಪಸ್ಸಿ ಸದ್ಯ ಪಿಂಕು ಸಿನಿಮಾ ಮೂಲಕ ಬಾಲಿವುಡ್'ನಲ್ಲಿ ಗಮನ ಸೆಳೆಯುತ್ತಿರೋ ಎಲ್ಲಾರಿಗೂ ಗೊತ್ತಿರುವ ವಿಷ್ಯ.
ಈ ಚಿತ್ರದಲ್ಲಿ ತಾಪ್ಸಿ ಶಕ್ತಿಯುತ ಮಹಿಳೆಯ ಪಾತ್ರದಲ್ಲಿ ಮಿಂಚಿದ್ದು ಈಗ ಎಲ್ಲಾರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಪುಡಾರಿಗಳಿಂದ ಒಬ್ಬ ಹುಡುಗಿಯೊಬ್ಬಳನ್ನು ತಾಪ್ಸಿ ರಕ್ಷಿಸಿ ತಮ್ಮ ಥೈರ್ಯವಂತೆ ಅನ್ನಿಸಿಕೊಂಡಿದ್ದಾಳೆ.
ನಾನೂ ಕೂಡ ಕಾಲೇಜಿಗೆ ಹೋಗುತ್ತಿದ್ದಾಗ ಇಂತಹದ್ದನ್ನೆಲ್ಲಾ ಎದುರಿಸಿದ್ದೇನೆ. ಪ್ರತಿದಿನ ಇಂತಹದ್ದನ್ನು ಸಹಿಸಿಕೊಳ್ಳಬೇಕಾಗಿತ್ತು ಎಂದು ತಾಪ್ಸಿ ತಮಗೆ ಆದ ಕಹಿ ಘಟನೆಯನ್ನ ಪಿಂಕು ಚಿತ್ರದ ಪ್ರಮೋಶನ್ ಸಮಯದಲ್ಲಿ ಹೇಳಿಕೊಂಡಿದ್ದಾರೆ.
