ಇಮ್ರಾನ್ ಹಶ್ಮಿಯೊಂದಿಗೆ ಬೋಲ್ಡ್ ಆಗಿ ಕಾಣಿಸಿಕೊಂಡು ಕೆಲ ಕಾಲ ಚಿತ್ರರಂಗದಿಂದಲೇ ಮರೆಯಾಗಿದ್ದ ನಟಿ ಇದೀಗ ಬಾಂಬ್ ಸಿಡಿಸಿದ್ದಾರೆ.

ರಾಧಿಕಾ ಆಪ್ಟೆ, ಸ್ವರಾ ಭಾಸ್ಕರ್, ರಿಚಾ ಚಡ್ಡಾ, ಕೊಂಕಣ ಸೇನ್ ಶರ್ಮಾ ನಂಥರ ಇದೀಗ ತನುಶ್ರೀ ದತ್ತ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಮಾಧ್ಯಮ ಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಕರಾಳ ಅನುಭವ ತೆರೆದಿಟ್ಟಿದ್ದಾರೆ.

ಹಾಲಿವುಡ್ ನಲ್ಲಿ ಕಳೆದ ಎರಡು ವರ್ಷದ ಹಿಂದೆ ಕೆಟ್ಟ ಅನುಭವವಾದರೆ ಭಾರತದಲ್ಲಿ ಹಲವು ಸಾರಿ ಆಗಿದೆ. 2008ರಲ್ಲಿಯೇ ನಾನು ಸಮಸ್ಯೆ ಎದುರಿಸಿದೆ. ಮಾಧ್ಯಮಗಳು ಸಹ ಇಂಥದರ ವಿರುದ್ಧ ಸರಿಯಾಗಿ ಧ್ವನಿ ಎತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

2008ರಲ್ಲಿ ಹಾರ್ನ್ ಒಕೆ ಪ್ಲೀಸ್ ಎಂಬ ಹಾಡಿನ ಚಿತ್ರೀಕಕರಣ ನಡೆಯುತ್ತಿತ್ತು. ಈ ವೇಳೆ ನಟನೊಬ್ಬ ನನ್ನನ್ನು ಬಿಗಿಯಾಗಿ ತಬ್ಬಿಕೊಳ್ಳಲು ಯತ್ನ ಮಾಡಿದ. ನಿನಗೆ ನೃತ್ಯ ಮಾಡುವುದನ್ನು ಹೇಳಿಕೊಡುತ್ತೇನೆ ಎಂದು ಬೇಕಾದಲ್ಲಿ ಮೈ ಕೈ ಎಲ್ಲ ಮುಟ್ಟಿ ಹಿಂಸಿಸಿದ ಎಂದು ನಟಿ ನೋವು ತೋಡಿಕೊಂಡಿದ್ದಾರೆ.