ಅಕ್ಷರಾ ಹಾಸನ್ ಪೋಟೋ ಲೀಕ್ ಹಿಂದೆ ಬಹುಭಾಷಾ ನಟಿ ಮಗ?

First Published 18, Nov 2018, 7:35 PM IST
Tanuj Virwani name on ex-girlfriend Akshara Haasans leaked pictures controversy
Highlights

ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಪೋಟೋಗಳು ಸೋಶಿಯಲ್ ಮೀಡಿಯಾಕ್ಕೆ ಹೇಗೆ ಲಭ್ಯವಾದವು? ಯಾವ ಮೂಲದಿಂದ ಹರಿದು ಬಂತು ಎಂಬುದಕ್ಕೆ ಮಾಹಿತಿ ಮಾತ್ರ ಸಿಕ್ಕಿರಲಿಲ್ಲ. ಅಕ್ಷರಾ ಸೈಬರ್ ಪೊಲೀಸರ ಮೊರೆ ಸಹ ಹೋಗಿದ್ದರು. ಆದರೆ ಈಗ ಸಿಕ್ಕಿರುವ ಮಾಹಿತಿ ಘಟನೆ ಹೇಗಾಯಿತು ಎಂಬುದನ್ನು ಹೇಳುತ್ತಿದೆ.

ಮುಂಬೈ[ನ.18] ಅಕ್ಷರಾ ಸೈಬರ್​ ಪೊಲೀಸರ ಮೊರೆ ಹೋದ ಮೇಲೆ ನಡೆದ ಬೆಳವಣಿಗೆಗಳು ಇಂಥ ಪೋಟೋ ಸೋರಿಕೆ ಹಿಂದಿನ ಸತ್ಯ ಬಿಚ್ಚಿಡುತ್ತಿದೆ.  ಅಕ್ಷರಾ ಅವರ ಮಾಜಿ ಪ್ರಿಯಕರ ತನುಜ್​ ವಿರ್ವಾನಿಯನ್ನು ವಿಚಾರಣೆ ಮಾಡಿದ್ದಾರೆ.

2013ರ ವರೆಗೂ ಅಕ್ಷರಾ ಐಫೋನ್​ 6 ಫೋನ್​ ಬಳಸುತ್ತಿದ್ದು, ಸದ್ಯ ಲೀಕ್​ ಆಗಿರುವ ಫೋಟೋಗಳು ಅದರಲ್ಲೇ ಇತ್ತಂತೆ. ಈ ಫೋನ್​ನಿಂದಲೇ ಈ ಚಿತ್ರಗಳನ್ನು ಅಕ್ಷರಾ ತನ್ನ ಮಾಜಿ ಪ್ರಿಯಕರ ತನುಜ್​ಗೂ ಕಳುಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತನುಜ್ ಬಹುಭಾಷಾ ನಟಿ ರತಿ ಅಗ್ನಿಹೋತ್ರಿ ಪುತ್ರ.

ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ?

ನಟಿ, ಅಕ್ಷರಾ ಹಾಸನ್ ಅಕ್ಕ ಶ್ರುತಿ ಹಾಸನ್ ಅವರ ಪೋಟೋಗಳು ಸಹ ಲೀಕ್ ಆಗಿತ್ತು. ಅಕ್ಷರಾ ಅವರ ಅಸಲಿ ಖಾತೆಯಲ್ಲಿ ಇಂಥ ಯಾವ ಪೋಟೋಗಳು ಇಲ್ಲ. ಈ ಹಿಂದೆ ನಟಿ ಆಮಿ ಜಾಕ್ಸನ್ ಮೊಬೈಲ್ ಸಹ ಹ್ಯಾಕ್ ಆಗಿತ್ತು.

2016ರ್ಲಿ ತನುಜ್​ ಹಾಗೂ ಅಕ್ಷರಾ ದೂರಾಗಿದ್ದು, ಅಲ್ಲಿಯವರೆಗೂ ತನುಜ್​ ಫೋನ್​ನಲ್ಲಿ ಈ ಚಿತ್ರಗಳು ಇದ್ದವಂತೆ. ಆದರೆ  ತನುಜ್  ಅವರೇ ಲೀಕ್ ಮಾಡಿರುವ ಬಗ್ಗೆ ಸ್ಪಷ್ಟ ಸಾಕ್ಷಿ ಇಲ್ಲ. ಒಟ್ಟಿನಲ್ಲಿ ಸೆಲೆಬ್ರಿಟಿಗಳ ಸೋರಿಕೆ ಸುದ್ದಿ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

  

 

loader