ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿರಿಯ ಸಂಸದರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಪಕ್ಷ, ರಾಜಕೀಯ ಬಿಟ್ಟು ಒಂದಾಗಿ ಇರೋಣ : ಪ್ರಜ್ವಲ್ ಗೆ ತೇಜಸ್ವಿ ಸಲಹೆ

ತೇಜಸ್ವಿ ಸೂರ್ಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ತೇಜಸ್ವಿ ಸೂರ್ಯ ಬಗ್ಗೆ ಕನ್ನಡಿಗರಷ್ಟೇ ಅಲ್ಲ, ತಮಿಳು ನಟ ಸೂರ್ಯ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರೇ! ತಮಿಳು ನಟ ಸೂರ್ಯನಿಗೂ, ತೇಜಸ್ವಿ ಸೂರ್ಯನಿಗೂ ಏನು ಸಂಬಂಧ ಎಂದು ಆಶ್ಚರ್ಯವಾಗಬಹುದು. ಸಂಬಂಧ ಇದೆ. 

ದಕ್ಷಿಣದಲ್ಲಿ ಉದಯಿಸಿದ ಸೂರ್ಯ; ಮತದಾರರಿಗೆ ಕೃತಜ್ಞತೆ

ತಮಿಳು ನಟ ಸೂರ್ಯ NGK ಎನ್ನುವ ಸಿನಿಮಾವೊಂದನ್ನು ಮಾಡಿದ್ದಾರೆ. ಇದು ರಿಲೀಸ್ ಆಗಲು ಸಿದ್ಧವಾಗಿ ನಿಂತಿದೆ. ಈ ಸಿನಿಮಾ ಕಥೆ ರಾಜಕೀಯದ ಬಗ್ಗೆ ಇದೆ. ಪ್ರಸಕ್ತ ರಾಜಕೀಯ ವಿದ್ಯಮಾನ, ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. 

ಈ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೂರ್ಯ, ಇಂದಿನ ಯುವಕರಿಗೆ ರಾಜಕೀಯದ ಬಗ್ಗೆ ಜ್ಞಾನವಿರಬೇಕು. ರಾಜಕೀಯ ಪಕ್ಷಗಳು ಏನೇನು ಕೆಲಸ ಮಾಡಿವೆ ಎಂದು ತಿಳಿದುಕೊಂಡಿರಬೇಕು ಎಂದು ಹೇಳಿದರು. ಈ ವೇಳೆ ಆಂಧ್ರದ ಜಗನ್, ನಮ್ಮ ಬೆಂಗಳೂರಿನ ತೇಜಸ್ವಿ ಸೂರ್ಯರನ್ನು ಪ್ರಸ್ತಾಪಿಸಿದರು. ತೇಜಸ್ವಿ ವಾಕ್ಚಾತುರ್ಯಾ, ಶ್ರದ್ಧೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.