ಟಗರು ಚಿತ್ರದ ಪಾತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್

Tagaru Role become viral n Social Media
Highlights

ಕಾನ್‌ಸ್ಟೇಬಲ್ ಸರೋಜ ಸ್ಟೇಷನ್‌'ನಲ್ಲಿದ್ದರೆ ಕ್ರಿಮಿಗಳು ಯಾರೂ ಪೊಲೀಸ್ ಸ್ಟೇಷನ್ ಬಿಟ್ಟು ಬರಲ್ಲ. - ಡಾಲಿ ಜಸ್ಟ್ ವಿಲನ್, ಡಾಲಿ ಡವ್ ಈಸ್ ಎಮೋಷನ್. ಸೂರಿ ನಿರ್ದೇಶನದ ‘ಟಗರು’ ಚಿತ್ರದ ಎರಡು ಕ್ಯಾರೆಕ್ಟರ್ ಸುತ್ತ ಟ್ರೋಲ್ ಆಗುತ್ತಿರುವ ಸ್ಯಾಂಪಲ್‌ಗಳು.

ಬೆಂಗಳೂರು (ಮಾ. 01): ಕಾನ್‌ಸ್ಟೇಬಲ್ ಸರೋಜ ಸ್ಟೇಷನ್‌'ನಲ್ಲಿದ್ದರೆ ಕ್ರಿಮಿಗಳು ಯಾರೂ ಪೊಲೀಸ್ ಸ್ಟೇಷನ್ ಬಿಟ್ಟು ಬರಲ್ಲ. - ಡಾಲಿ ಜಸ್ಟ್ ವಿಲನ್, ಡಾಲಿ ಡವ್ ಈಸ್ ಎಮೋಷನ್. ಸೂರಿ ನಿರ್ದೇಶನದ ‘ಟಗರು’ ಚಿತ್ರದ ಎರಡು ಕ್ಯಾರೆಕ್ಟರ್ ಸುತ್ತ ಟ್ರೋಲ್ ಆಗುತ್ತಿರುವ ಸ್ಯಾಂಪಲ್‌ಗಳು.

ಒಂದು ಪೊಲೀಸ್ ಕಾನ್‌ಸ್ಟೇಬಲ್ ಆಗಿಯೂ ಚಿತ್ರದ ವಿಲನ್ ಡಾಲಿ ಜತೆ ಪ್ರೇಮ್ ಕಹಾನಿ ನಡೆಸುವ ಸರೋಜ. ಇವರ ನಿಜ ಹೆಸರು ತ್ರಿವೇಣಿ ರಾವ್. ಆಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಶ್ ನಟನೆಯ ‘ಕಿರಾತಕ’ ಚಿತ್ರದಲ್ಲಿ ಯಶ್‌ರಿಂದ ಕಿಡ್ನಾಪ್‌ಗೆ ಒಳಗಾಗುವ ಹುಡುಗಿಯ ಪಾತ್ರ ಮಾಡಿದ್ದಾರೆ. ಅಲ್ಲದೆ ದರ್ಶನ್ ನಟನೆಯ ‘ಚಕ್ರವರ್ತಿ’ ಚಿತ್ರದಲ್ಲೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ‘ಬಾಹುಬಲಿ’ ಚಿತ್ರದಲ್ಲಿ ಶಿವಗಾಮಿ ಪಾತ್ರಧಾರಿ ರಮ್ಯಾ ಕೃಷ್ಣ ಅವರ ಹಿಂದೆಯೇ ನಿಂತಿರುವ ಪಾತ್ರ ಮಾಡಿರುವುದು ಬೇರ‌್ಯಾರೂ ಅಲ್ಲ, ಅದೇ ಸರೋಜ ಅಲಿಯಾಸ್ ತ್ರಿವೇಣಿ ರಾವ್.

ಈ ಚಿತ್ರದ ನಂತರ ತೆಲುಗಿನಲ್ಲೇ ಬ್ಯುಸಿಯಾಗಿರುವ ಈಕೆಯನ್ನು ಸೂರಿ ಕರೆತಂದು ‘ಟಗರು’ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದಾರೆ. ಯಾವಾಗ ಈ ಚಿತ್ರದಲ್ಲಿ ಡಾಲಿ ಪಾತ್ರಧಾರಿ ಧನಂಜಯ್ ಹುಡುಗಿಯಾಗಿ ಕಾಣಿಸಿಕೊಂಡರೋ ಆಗಲೇ ಈಕೆಯ ಸುತ್ತ ಸಿಕ್ಕಾಪಟ್ಟೆ ತಮಾಷೆಯ ಟ್ರೋಲ್ ಗಳು ಶುರುವಾಗಿವೆ. ಇದೇ ರೀತಿ ಟ್ರೋಲ್‌ಗಳಿಗೆ ಒಳಗಾಗಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದರೂ ಗಮನ ಸೆಳೆದಿರುವುದು ಅನಿತಾ ಭಟ್. ‘ಡಾಲಿ ಜಸ್ಟ್ ವಿಲನ್, ಡಾಲಿ ಡವ್ ಈಸ್ ಎಮೋಷನ್’ ಎನ್ನುವಂತಹ ಫನ್ನಿ ಟ್ರೋಲ್‌ಗಳು ಅನಿತಾ ಭಟ್ ಹೆಸರಿಗೆ ಸೇರಿಕೊಂಡಿದೆ. 

loader