ಸ್ವಿಜರ್ಲೆಂಡ್ ನಲ್ಲಿ ಶ್ರೀ ದೇವಿ ಪ್ರತಿಮೆ ನಿರ್ಮಾಣ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Sep 2018, 12:12 PM IST
Switzerland To Plan install Statue Of Sridevi
Highlights

ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ. ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ
ಗೌರವ ಸೂಚಿಸುವ ಚಿಂತನೆ ನಡೆದಿದೆ. 

ಬರ್ನ್‌ (ಸ್ವಿಜರ್ಲೆಂಡ್):  ದಿವಂಗತ ನಟಿ ಶ್ರೀದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ವಿಜರ್ಲೆಂಡ್ ಸರ್ಕಾರ ಚಿಂತನೆ ನಡೆಸಿದೆ.

ಶ್ರೀದೇವಿ ಅವರ ಜನಪ್ರಿಯ ಸಿನಿಮಾ ‘ಚಾಂದಿನಿ’ಯ ಚಿತ್ರೀಕರಣ ನಡೆದದ್ದು ಇಲ್ಲಿನ ಮನೋಹರ ಪ್ರದೇಶದಲ್ಲಿಯೇ. ಇಲ್ಲಿನ ಪ್ರವಾಸೋದ್ಯಮದ ಉತ್ತೇಜನಕ್ಕೆ ಶ್ರೀದೇವಿ ತಮ್ಮ ಸಿನಿಮಾ ಮೂಲಕ ನೀಡಿರುವ ಕೊಡುಗೆಯನ್ನು ಮನಗಂಡು, ಅವರ ಪ್ರತಿಮೆ ಅನಾವರಣಗೊಳಿಸಿ ಗೌರವ ಸೂಚಿಸುವ ಚಿಂತನೆ ನಡೆದಿದೆ. 

ಈ ಹಿಂದೆ ಇದೇ ಕಾರಣಕ್ಕಾಗಿ ಖ್ಯಾತ ಚಿತ್ರ ನಿರ್ದೇಶಕ ಯಶ್ ಚೋಪ್ರಾ ಪ್ರತಿಮೆಯನ್ನು ಸ್ವಿಜರ್ಲೆಂಡ್ ಸರ್ಕಾರ ಅನಾವರಣ ಗೊಳಿಸಿತ್ತು. ಚೋಪ್ರಾ ಅವರ ಹಲವು ಚಿತ್ರಗಳಲ್ಲಿ ಸ್ವಿಜರ್ಲೆಂಡ್‌ನ ಸುಂದರ ತಾಣ ಬಳಸಿಕೊಳ್ಳಲಾಗಿದೆ.

loader