ನಟನೆಯಲ್ಲಿ ಹೇಗೆ ಬೋಲ್ಡ್ ಆಗಿ ಗುರುತಿಸಿಕೊಂಡಿದ್ದಾರೋ ಅದೇ ರೀತಿ ನಟಿ ಸ್ವರಾ ಭಾಸ್ಕರ್ ಸಾಮಾಜಿಕ ತಾಣದಲ್ಲಿ ಧ್ವನಿ ಎತ್ತುವುದರಲ್ಲಿಯೂ ಸಿದ್ಧಹಸ್ತರು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ವಿರುದ್ಧ ಸಮರ ಸಾರಿದ ಸ್ವರಾ ಆರಂಭಿಕ ಜಯ ಕೂಡಾ ಸಂಪಾದಿಸಿದ್ದಾರೆ.
ಮುಂಬೈ(ಸೆ.11) ಕೇರಳದಲ್ಲಿ ಸನ್ಯಾಸಿನಿಯೊಬ್ಬರ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ವರಾ ಧ್ವನಿ ಎತ್ತಿದ್ದರು. ಕೇರಳದ ಶಾಸಕರೊಬ್ಬರು ನೀಡಿದ್ದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೀಳುಮಟ್ಟದ ಹೇಳಿಕೆ ನೀಡುವುದು ಸರಿ ಅಲ್ಲ ಎಂದಿದ್ದರು.
ಆದರೆ ಸ್ವರಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೆಶಕ ವಿವೇಕ್ ಅಗ್ನಿಹೋತ್ರಿ ನಾನು ಸಹ ಕೇರಳದ ಶಾಸಕನ ಹೇಳಿಕೆ ಒಪ್ಪುತ್ತೇನೆ ಎಂಬ ರೀತಿಯಲ್ಲಿ ಮಾತನಾಡಿದ್ದರು.
ಈ ಪ್ರಕರಣದ ನಂತರ ಎಚ್ಚೆತ್ತ ನಟಿ ಇದೊಂದು ಆಕ್ಷೇಪಾರ್ಹ ಟ್ವೀಟ್ ಎಂದು ಹೇಳಿ ದೂರು ದಾಖಲಿಸಿದ್ದರು. ಆದರೆ ಇದಾದ ಮೇಲೆ ವಿವೇಕ್ ಅಗ್ನಿಹೋತ್ರಿ ಖಾತೆ ಬ್ಲಾಕ್ ಆಗಿದ್ದು ಈಗ ಮತ್ತೆ ಆಕ್ಟೀವ್ ಆಗಿದೆ.

