ಬಾಲಿವುಡ್ ನಟಿ ಕಂ ಮಾಡೆಲ್ ಸುಶ್ಮಿತಾ ಸೇನ್‌ಗೆ ಈಗ 43. ಆ ವಯಸ್ಸಿನ ಇತರರಿಗೆ ಹೋಲಿಸಿದರೆ ಈಕೆ ಹರೆಯದ ತರುಣಿಯಂತೆ ಕಾಣುತ್ತಾರೆ. ಈಕೆ ಮಾಡುವ ವರ್ಕೌಟ್ ವೀಡಿಯೋಗಳು ಸಖತ್ ಥ್ರಿಲಿಂಗ್.

ಬಳ್ಳಿ ಯಂತೆ ದೇಹ ಬಾಗಿ ಬಳುಕಿಸುವ ಸುಶ್ಮಿತಾ ಫಿಟ್‌ನೆಸ್ ವಿಚಾರದಲ್ಲಿ ಟೀನೇಜ್ ಹುಡುಗಿಯರಿಗೂ ಸವಾಲೆಸೆಯು ವಂತಿದ್ದಾರೆ. ಇವರ ಇನ್ ಸ್ಟಾಗ್ರಾಮ್ ತುಂಬ ಪುಟ್ಟ ಮಗಳು ಆಯೆಶಾ ಫೋಟೋ, ಬಿಟ್ಟರೆ ಈಕೆಯ ಫಿಟ್‌ನೆಸ್ ವೀಡಿಯೋ.

ಡಯೆಟ್ ಹೇಗಿರುತ್ತೆ?

ಬಿಸಿನೀರಿನ ಜೊತೆಗೆ ಹಣ್ಣುಗಳ ಸೇವನೆಯಿಂದ ದಿನದ ಆರಂಭ. ಬ್ರೇಕ್‌ಫಾಸ್ಟ್‌ಗೆ ಎಗ್‌ವೈಟ್ ಹಾಗೂ ಬ್ರೌನ್ ಬ್ರೆಡ್. ಹೊಟ್ಟೆ ಖಾಲಿ ಬಿಡಬಾರದು ಎನ್ನುವುದು ಇವರು ರೂಢಿಸಿಕೊಂಡು ಬಂದ ಥಿಯರಿ. ಪ್ರತೀ ಎರಡು ಗಂಟೆಗೊಮ್ಮೆ ಏನಾದ್ರೂ ಬಾಯಿಗೆ ಹಾಕಿಕೊಂಡರೇ ನೆಮ್ಮದಿ. ಊಟದಲ್ಲಿ ಚಪಾತಿ, ಅನ್ನ, ದಾಲ್, ಮೀನು ಇತ್ಯಾದಿ ಇರುತ್ತೆ. ಆದರೆ ತೂಕ ಹೆಚ್ಚಾಗುತ್ತೆ ಅನ್ನುವ ಕಾರಣಕ್ಕೆ ಸ್ವೀಟ್ಸ್‌ನಿಂದ ದೂರ ಉಳಿದಿದ್ದಾರೆ.

ಎತ್ತರ: 5'7 ತೂಕ : 54 ಕೆ.ಜಿ ಸುತ್ತಳತೆ 33- 25-34

ಮಜಾ ವರ್ಕೌಟ್

ಸುಶ್ಮಿತಾ ಸೆನ್ ಇನ್‌ಸ್ಟಾಗ್ರಾಮ್‌ಗೆ ವಿಸಿಟ್ ಮಾಡಿದರೆ ಸುಶ್ಮಿತಾ ವರ್ಕೌಟ್ ಲೋಕ ತೆರೆದುಕೊಳ್ಳುತ್ತದೆ. ಮನೆಯನ್ನೇ ಜಿಮ್ ಮಾಡಿಕೊಂಡಿರುವ ಈಕೆಯ ವರ್ಕೌಟ್‌ಗೆ ಪುಟಾಣಿ ಮಗಳು ಆಯೆಶಾ ಕಂಪೆನಿ ನೀಡುತ್ತಾಳೆ. ವಾರದಲ್ಲಿ ನಾಲ್ಕು ದಿನ 2 ಗಂಟೆಗಳ ಕಾಲ ವರ್ಕೌಟ್ ಮಾಡುತ್ತಾರೆ. ದೇಹದ ಸಮ ತೋಲನ ಕಾಯ್ದುಕೊಳ್ಳುವ ಸರ್ಕಸ್‌ನಂಥ ವರ್ಕೌಟ್‌ಅನ್ನು ಸಖತ್ ಕ್ರೇಜ್ ನಿಂದ ಮಾಡ್ತಾರೆ. ಮಗಳಿಗೂ ಎನ್‌ಜಾಯ್‌ಮೆಂಟ್ ನೀಡುವ ಫನ್ನೀ ವರ್ಕೌಟ್ಗಳನ್ನು ಮಾಡೋದೂ ಸುಶ್ಮಿತಾಗಿಷ್ಟ. ವರ್ಕೌಟ್‌ಅನ್ನು ಎನ್‌ಜಾಯ್ ಮಾಡ್ಬೇಕು, ರೂಲ್ ಅಂತ ಮಾಡ್ಬಾರ್ದು ಅನ್ನೋದು ಸುಶ್ಮಿತಾ ಅನುಭವದ ಮಾತು. 

View post on Instagram

View post on Instagram