ನವದೆಹಲಿ[ನ.11]: ಸುಷ್ಮಿತಾ ಸೇನ್ ಇತ್ತೀಚೆಗೆ ತನ್ನೆಲ್ಲಾ ಸಮಯವನ್ನು ತನ್ನ ಮಕ್ಕಳು ಹಾಗೂ 15 ವರ್ಷಕ್ಕಿಂತ ಕಿರಿಯ ತನ್ನ ಪ್ರಿಯಕರ ರೋಹ್ಮನ್ ಶಾಲ್‌ರೊಂದಿಗೆ ಕಳೆಯುತ್ತಿದ್ದಾರೆ. ಈ ಹಿಂದೆ ತನ್ನ ಮಕ್ಕಳೊಂದಿಗೆ ಮಾಡುತ್ತಿದ್ದ ಮೋಜು ಮಸ್ತಿಯ ವಿಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡುತ್ತಿದ್ದ ಸುಷ್ಮಿತಾ ಇತ್ತೀಚೆಗೆ ತನ್ನ ಪ್ರಿಯಕರನೊಂದಿಗಿನ ವಿಡಿಯೋಗಳನ್ನೂ ಶೇರ್ ಮಾಡಲಾರಂಭಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರೋಹ್ಮನ್ ಜೊತೆಗೆ ವ್ಯಾಯಾಮ ಮಾಡುತ್ತಿದ್ದ ಫೋಟೋ ಹಾಕಿದ್ದರು. ಅದರೆ ಈ ಬಾರಿ ರೋಹ್ಮನ್ ಸುಷ್ಮಿತಾರ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ದೃಶ್ಯಗಳು ಕಂಡು ಬಂದಿವೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅವರು ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಅವರು ತಮ್ಮ ಮಕ್ಕಳು ಹಾಗೂ ಪ್ರಿಯಕರನೊಂದಿಗೆ ಕುಳಿತಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ರೋಹ್ಮನ್‌ರೊಂದಿಗೆ ಕುಳಿತಿರುವ ಸುಷ್ಮಿತಾ ಬಹಳಷ್ಟು ರೊಮ್ಯಾಂಟಿಕ್ ಅಗಿ ಕಂಡು ಬಂದಿದ್ದಾರೆ. ಇವರಿಬ್ಬರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದೆ ಎಂಬುವುದು ಅಭಿಮಾನಿಗಳ ಮಾತಾಗಿದೆ.

 
 
 
 
 
 
 
 
 
 
 
 
 

#duggadugga ❤️

A post shared by Sushmita Sen (@sushmitasen47) on Nov 6, 2018 at 12:04pm PST

ರೋಹ್ಮನ್ ಶಾಲ್ ಓರ್ವ ಸೂಪರ್ ಮಾಡೆಲ್ ಆಗಿದ್ದಾರೆ. ಆದರೆ ರೋಹ್ಮನ್ ಹಾಗೂ ಸುಷ್ಮಿತಾ ವಯಸ್ಸಿನಲ್ಲಿ ಒಟ್ಟು 15 ವರ್ಷಗಳ ಅಂತರವಿರುವುದು ಅಚ್ಚರಿ ಮೂಡಿಸಿದೆ. ಸುಷ್ಮಿತಾರಿಗೆ 42 ವರ್ಷವಾಗಿದ್ದರೆ, ರೋಹ್ಮನ್‌ಗಿನ್ನೂ 27 ವರ್ಷ ವಯಸ್ಸಷ್ಟೇ.

ಸುಷ್ಮಿತಾ ಸೇನ್ 1994ರಲ್ಲಿ ಭುವನ ಸುಂದರಿಯಾಗಿ ಹೊರ ಹೊಮ್ಮಿದ್ದರು. ಈ ಮೂಲಕ ಸುಷ್ಮಿತಾ ಸೇನ್ ಮಿಸ್ ಯೂನಿವರ್ಸ್ ಆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 1996ರಲ್ಲಿ 'ದಸ್ತಕ್' ಎಂಬ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸುಷ್ಮಿತಾ, ಬಳಿಕ 'ಬೀವಿ ನಂಬರ್ 1', 'ಮೈನೇ ಪ್ಯಾರ್ ಕ್ಯೂಂ ಕಿಯಾ?', 'ಮೆ ಹೂಂ ನಾ', 'ಫಿಲ್ಹಾಲ್' ಮೊದಲಾದ ಸಿನಿಮಾಗಳಲ್ಲಿ ನಟಿಸಿ ಜನರ ಮನಗೆದ್ದಿದ್ದರು.