ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು, ಸಲಹುತ್ತಿದ್ದರೂ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮದುವೆ ಬಗ್ಗೆ ಮಾತ್ರ ಯೋಚಿಸಿರಲಿಲ್ಲ. ಆದರೆ, ಇದೀಗ ದಾಂಪತ್ಯಕ್ಕೆ ಕಾಲಿಡುವ ಸಂಬಂಧ ಮಾತನಾಡುತ್ತಿದ್ದಾರೆ. ಯಾರು ವರ?

ಬಾಲಿವುಡ್‌ನಲ್ಲಿ ಮದುವೆ ಸಂಭ್ರಮ ಹೆಚ್ಚಾಗುತ್ತಿದೆ. ಒಬ್ಬರಾದಮೇಲೊಬ್ಬರು ನಾಲ್ವರಾಗುತ್ತಿದ್ದಾರೆ. ಸೋನಮ್ ಕಪೂರ್, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಛೋಪ್ರಾ...ಇದೀಗ ಸುಶ್ಮಿತಾ ಸೇನ್ ಸಹ ಮದುವೆಯಾಗೋ ಮನಸ್ಸು ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಹೌದು, ಎಲ್ಲೆಡೆ ನೋಡಿದರೂ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಕಾಣಿಸುತ್ತಿರುವ ಈ ವಿಶ್ವ ಸುಂದರಿ ಇದೀಗ ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಇಬ್ಬರೂ ಪರಿಚಿತರಾಗಿ, ಹೆಚ್ಚು ದಿನಗಳೇನೂ ಆಗಿಲ್ಲ. 2 ತಿಂಗಳ ಹಿಂದೆಯಷ್ಟೇ ಫ್ಯಾಶನ್ ಶೋನಲ್ಲಿ ಭೇಟಿಯಾಗಿದ್ದರು. ಅಲ್ಲಿ ಬೆಳೆದ ಸ್ನೇಹ ಪ್ರೀತಿಯಾಗಿ ಬೆಳೆದಿದೆ. ಈಗ ಆ ಪ್ರೀತಿ ಮುಂದಿನ ವರ್ಷ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

ಅಷ್ಟೇ ಅಲ್ಲದೆ ಸುಷ್ಮಿತಾ ಮಕ್ಕಳೂ ಈ ಬಾಂಧವ್ಯಕ್ಕೆ ಒಪ್ಪಿದ್ದಾರಂತೆ. ರೋಹ್ಮನ್-ಸುಶ್ಮಿತಾ ಮಕ್ಕಳೊಟ್ಟಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಜಾಲತಾಣದಲ್ಲಿಯೂ ಹರಿದಾಡುತ್ತದೆ.