ಒಂದು ಕಾಲದ ನಾಯಕ ನಟಿ ಸುಶ್ಮಿತಾ ಸೇನ್ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಡಯೆಟ್, ಕಸರತ್ತು ಮಾಡಿಕೊಂಡು ಹೊಟ್ಟೆಯನ್ನ ಕರಗಿಸಿಕೊಂಡು ಗಮನ ಸೆಳೆದಿದ್ದರು.
ನವದೆಹಲಿ (ನ.19): ಒಂದು ಕಾಲದ ನಾಯಕ ನಟಿ ಸುಶ್ಮಿತಾ ಸೇನ್ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಡಯೆಟ್, ಕಸರತ್ತು ಮಾಡಿಕೊಂಡು ಹೊಟ್ಟೆಯನ್ನ ಕರಗಿಸಿಕೊಂಡು ಗಮನ ಸೆಳೆದಿದ್ದರು.
ಈಗ ತಮ್ಮ 42 ನೇ ಹುಟ್ಟುಹಬ್ಬಕ್ಕೆ ತಾವೇ ಒಂದು ಗಿಫ್ಟ್ ಕೊಟ್ಟುಕೊಂಡಿದ್ದಾರೆ. ಅದುವೇ ಕರಾಟೆ ಕಲೀಕೆ. 42 ನೇ ವಯಸ್ಸಿನಲ್ಲೂ ಯುವತಿಯರು ನಾಚುವಂತೆ ಕರಾಟೆ ಅಭ್ಯಾಸ ಮಾಡುತ್ತಿರುವ ಸುಶ್ಮಿತಾ ಕರಾಟೆಯ ಕಲಿಕೆಯ ಒಂದು ಭಾಗವಾಗಿರೋ ನುಂಚಾಕು (Nunchaku) ಯನ್ನ ಅಷ್ಟೇ ಸುಲಲಿತವಾಗಿಯೇ ತಿರುಗಿಸುತ್ತಾರೆ. ಅಭ್ಯಾಸದ ಆ ವೀಡಿಯೋಗಳನ್ನ ಸ್ವತ ಸುಶ್ಮಿತಾ ಸೆನ್ ತಮ್ಮ ಟ್ವಿಟರ್ ಅಕೌಂಟ್ ನಲ್ಲೂ ಶೇರ್ ಮಾಡಿದ್ದಾರೆ.
