ಹಿಂದಿಯ ಬಿಗ್ ಬಾಸ್ 12ರ ಮನೆ ಪ್ರವೇಶ ಮಾಡಿದ ಕಾಲದಿಂದ ಕ್ರಿಕೆಟಿಗ ಶ್ರೀಶಾಂತ್ ಸಖತ್ ಸುದ್ದಿಯಲ್ಲೇ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾಜಿ ಕ್ರಿಕೆಟಿಗ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ.  

ಬಿಗ್ ಬಸ್ 12 ರ ಮನೆ ಪ್ರವೇಶ ಮಾಡಿದಾಗಿನಿಂದ ಕ್ರಿಕೆಟಿಗ ಶ್ರೀಶಾಂತ್ ಮನೆಯೊಳಗಿನ ಅನೇಕರೊಂದಿಗೆ ಸಂಘರ್ಷ ಮಾಡಿಕೊಂಡೇ ಬಂದಿದ್ದಾರೆ. ರೋಮಿಲ್ ಚಕ್ರವರ್ತಿ ಮತ್ತು ಸುರಭಿ ರಾಣಾ ಅವರೊಂದಿಗಿನ ಕಿತ್ತಾಟ ಅವರನ್ನು ಸಿಕ್ರೇಟ್ ರೂಂ ತನಕ ತೆಗೆದುಕೊಂಡು ಹೋಗಿತ್ತು.

ಇದೀಗ ಮನೆಗೆ ಮತ್ತೆ ಹಿಂದಿರುಗುತ್ತಲೇ ದೀಪಿಕಾ ಕಾರ್ಕರ್ ಬಣ್ಣ ಬಯಲು ಮಾಡುತ್ತೇನೆ ಎಂದು ಗುಡುಗಿದ ಶ್ರೀಶಾಂತ್ ಪಾಠ ಕಲಿಸಲು ಮುಂದಾಗಿದ್ದರು.

ಆದರೆ ಬಿಗ್ ಬಾಸ್ ನೀಡಿದ ಲಕ್ಸುರಿ ಟಾಸ್ಕ್ ನಲ್ಲಿ ಕ್ರಿಕೆಟಿಗ ಉಲ್ಟಾ ಹೊಡೆದುದ್ದು ಅದೇ ದೀಪಿಕಾಗೆ ಸಹಾಯ ಹಸ್ತ ಚಾಚಿದರು. ಇದು ಮನೆಯವರೆಲ್ಲರ ವಿರೋಧಕ್ಕೆ ಕಾರಣವಾಗಿದೆ. ಶ್ರೀಶಾಂತ್ ನೆರವಿನಿಂದ ಈ ಟಾಸ್ಕ್ ನಲ್ಲಿ ದೀಪಿಕಾ ಜಯ ಗಳಿಸಿದರು.

ಆದರೆ ಮನೆಯವರು ಶ್ರೀಶಾಂತ್ ಡಬಲ್ ಸ್ಟಾಂಡರ್ಡ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು ಅಲ್ಲದೇ ಇನ್ನು ಮುಂದೆ ಯಾವ ಕಾರಣಕ್ಕೂ ನೆರವು ನೀಡುವುದಿಲ್ಲ ಎಂದು ಹೇಳಿದ್ದಾರೆ. ಶ್ರೀಶಾಂತ ಮಾನಸಿಕ ಹಿಡಿತ ಕಳೆದುಕೊಂಡಿದ್ದಾರೆ ಎಂದು ಸುರಭಿ ರಾಣಾ ಆರೋಪ ಮಾಡಿದ್ದಾರೆ.

View post on Instagram
View post on Instagram