ತಮಿಳು ಸೂಪರ್‌ಸ್ಟಾರ್ ಧನುಷ್ ಕನ್ನಡ ಚಿತ್ರ ನಿರ್ಮಿಸಲಿದ್ದಾರೆ. ಅವರಿಗೆ ಜೊತೆಯಾಗಲಿರುವುದು ‘ಸವಾರಿ’, ‘ಪೃಥ್ವಿ’ ಖ್ಯಾತಿಯ ನಿರ್ದೇಶಕ ಜೇಕಬ್ ವರ್ಗೀಸ್. ಹಾಗಂತ ಜೇಕಬ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ. ಧನುಷ್‌ಗೆ ನಿರ್ಮಾಣದಲ್ಲಿ ಜೊತೆಯಾಗುತ್ತಿದ್ದಾರೆ.

ಬೆಂಗಳೂರು (ಜ.04): ತಮಿಳು ಸೂಪರ್‌ಸ್ಟಾರ್ ಧನುಷ್ ಕನ್ನಡ ಚಿತ್ರ ನಿರ್ಮಿಸಲಿದ್ದಾರೆ. ಅವರಿಗೆ ಜೊತೆಯಾಗಲಿರುವುದು ‘ಸವಾರಿ’, ‘ಪೃಥ್ವಿ’ ಖ್ಯಾತಿಯ ನಿರ್ದೇಶಕ ಜೇಕಬ್ ವರ್ಗೀಸ್. ಹಾಗಂತ ಜೇಕಬ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ. ಧನುಷ್‌ಗೆ ನಿರ್ಮಾಣದಲ್ಲಿ ಜೊತೆಯಾಗುತ್ತಿದ್ದಾರೆ.

ಧನುಷ್‌'ರ ವಂಡರ್‌'ಬಾರ್ ಸಂಸ್ಥೆ ಮತ್ತು ಜೇಕಬ್ ವರ್ಗೀಸ್ ಇಬ್ಬರೂ ಸೇರಿಕೊಂಡು ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಜೇಕಬ್ ಸ್ನೇಹ ವಲಯದಲ್ಲಿರುವ ನಿರ್ದೇಶಕರೊಬ್ಬರು ಚಿತ್ರ ನಿರ್ದೇಶಿಸಲಿದ್ದಾರೆ. ಧನುಷ್ ಈಗಾಗಲೇ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಹೊಂದಿದ್ದಾರೆ. ಅಲ್ಲದೇ ಅವರು ನಿರ್ದೇಶಿಸಿದ್ದ ‘ಪವರ್ ಪಾಂಡಿ’ ಚಿತ್ರ ಕನ್ನಡದಲ್ಲಿ ‘ಅಂಬಿ ನಿನಗೆ ವಯಸ್ಸಾಯ್ತೋ’ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. ಇಂಥಾ ಸಂದರ್ಭದಲ್ಲಿ ಅವರು ಜೇಕಬ್ ಜೊತೆ ಸೇರಿ ಕನ್ನಡದಲ್ಲೂ ಒಂದು ಚಿತ್ರ ನಿರ್ಮಾಣ ಮಾಡುವ ಆಲೋಚನೆ ಮಾಡಿದ್ದಾರೆ.

ಪ್ರಸ್ತುತ ಜೇಕಬ್ ತಮ್ಮ ನಿರ್ದೇಶನದ ‘ಚಂಬಲ್’ ಚಿತ್ರದ ಕೆಲಸದಲ್ಲಿ ದ್ದಾರೆ. ಈ ತಿಂಗಳ ಕೊನೆಯಲ್ಲಿ ‘ಚಂಬಲ್’ ಚಿತ್ರಕ್ಕೆ ಸೆನ್ಸಾರ್ ಆಗುವ ಸಾಧ್ಯತೆ ಇದೆ. ಅಷ್ಟು ಹೊತ್ತಿಗೆ ಧನುಷ್ ನಿರ್ಮಾಣದ ಚಿತ್ರದ ರೂಪು ರೇಷೆಯೂ ನಿರ್ಧಾರವಾಗಲಿದೆ. ಈ ಚಿತ್ರದಲ್ಲಿ ಧನುಷ್ ನಟಿಸುತ್ತಾರಾ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಈ ಚಿತ್ರದಲ್ಲಿ ನಾಯಕನಾಗಿ ರಿಷಿ ಮತ್ತು ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುವ ಸಾಧ್ಯತೆಗಳಿವೆ. ಸದ್ಯಕ್ಕೆ ಯಾವುದೂ ಅಂತಿಮಗೊಂಡಿಲ್ಲ. ಈಗಿನ್ನೂ ಎಲ್ಲವೂ ಮಾತುಕತೆ ಹಂತದಲ್ಲಿದೆ. ಧನುಷ್ ಅವರ ಚಿತ್ರಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡುವುದು ಜೇಕಬ್ ವರ್ಗೀಸ್. ಹಾಗಾಗಿ ಅವರಿಬ್ಬರು ಈ ಪ್ರೊಜೆಕ್ಟ್‌ನಲ್ಲಿ ಒಟ್ಟು ಸೇರಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಜೇಕಬ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.