ಅವಳಿ ಮಕ್ಕಳ ತಾಯಿಯಾದ ಸನ್ನಿ ಲಿಯೋನ್

First Published 5, Mar 2018, 1:48 PM IST
Sunny Leone husband Daniel become Parents again
Highlights

ಕಳೆದ ವರ್ಷ ಮಗುವೊಂದನ್ನು ದತ್ತು ಪಡೆದಿದ್ದ ಸನ್ನಿ ಲಿಯೋನ್’ಗೆ ಅದೃಷ್ಟ ಖುಲಾಯಿಸಿದೆ. ಕಳೆದ ವರ್ಷ ಮುದ್ದಾದ ಹೆಣ್ಣು ಮಗುವೊಂದನ್ನು ದತ್ತು ಪಡೆದು ತಂದೆ ತಾಯಿಯಾಗಿದ್ದ ಸನ್ನಿ ಲಿಯೋನ್ – ಡೇನಿಯಲ್ ವೇಬರ್  ಅಪ್ಪ ಅಮ್ಮ ಆದ ಖುಷಿಯಲ್ಲಿದ್ದಾರೆ.

ಮುಂಬೈ : ಕಳೆದ ವರ್ಷ ಮಗುವೊಂದನ್ನು ದತ್ತು ಪಡೆದಿದ್ದ ಸನ್ನಿ ಲಿಯೋನ್’ಗೆ ಅದೃಷ್ಟ ಖುಲಾಯಿಸಿದೆ. ಕಳೆದ ವರ್ಷ ಮುದ್ದಾದ ಹೆಣ್ಣು ಮಗುವೊಂದನ್ನು ದತ್ತು ಪಡೆದು ತಂದೆ ತಾಯಿಯಾಗಿದ್ದ ಸನ್ನಿ ಲಿಯೋನ್ – ಡೇನಿಯಲ್ ವೇಬರ್  ಅಪ್ಪ ಅಮ್ಮ ಆದ ಖುಷಿಯಲ್ಲಿದ್ದಾರೆ.

ಬಾಡಿಗೆ ತಾಯಿ ಮೂಲಕ ಸನ್ನಿ ಮಗುವನ್ನು ಪಡೆದಿದ್ದು, ಈಗ ನಮ್ಮ ಕುಟುಂಬ ಪರಿಪೂರ್ಣವಾಗಿದೆ ಎಂದು ಸನ್ನಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಖುಷಿಯನ್ನು ಹಂಚಿಕೊಳ್ಳಲು ನನಗೆ ಪದಗಳೇ ಸಾಲುತ್ತಿಲ್ಲ. ಅಶರ್ ಹಾಗೂ ನೋಹಾ ಎಂದು ಇಬ್ಬರು ಮಕ್ಕಳಿಗೆ ನಾಮಕರಣವನ್ನು ಕೂಡ ಮಾಡಲಾಗಿದೆ.

2 ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನಿಂದ ತಮ್ಮ ಕುಟುಂಬ ಪೂರ್ಣವಾಗಿದೆ. ನಮ್ಮ ಬದುಕಲ್ಲಿ ಹೊಸ ಅಧ್ಯಾಯವೊಂದು ತೆರೆದಿದೆ ಎಂದು ಡೇನಿಯನ್ ಕೂಡ  ಹೇಳಿಕೊಂಡಿದ್ದಾರೆ.

 

loader