'ಪೈಲ್ವಾನ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ | ಹೊಸ ಲುಕ್ ನಲ್ಲಿ ಸುನೀಲ್ ಶೆಟ್ಟಿ | ರಫ್ ಅಂಡ್ ಟಫ್ ಲುಕ್ ನಲ್ಲಿ ಸುನೀಲ್ ಶೆಟ್ಟಿ
ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ವರಮಹಾಲಕ್ಷ್ಮೀ ಹಬ್ಬದಂದು ತೆರೆಗೆ ಬರಲು ಸಿದ್ಧವಾಗಿದೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿ ನಿಂತು ಹೆಬ್ಬುಲಿಯಂತೆ ಘರ್ಜಿಸುವ ಟೀಸರ್ ಹಾಗೂ ಪೋಸ್ಟರ್ ಸಿಕ್ಕಾಪಟ್ಟೆ ಕಿಕ್ ಕೊಟ್ಟಿತ್ತು. ಈಗ ಇನ್ನೊಂದು ಪೋಸ್ಟರ್ ರಿಲೀಸಾಗಿದೆ.
ಪೈಲ್ವಾನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆ ಬಾಲಿವುಡ್ ನ ಸುನೀಲ್ ಶೆಟ್ಟಿ ನಟಿಸ್ತಾರೆ ಎನ್ನಲಾಗಿತ್ತು. ಅವರ ಪಾತ್ರ ಯಾವುದೆಂದು ಇನ್ನೂ ರಿಲೀಲಾಗಿರಲಿಲ್ಲ. ಈಗ ಸುನೀಲ್ ಶೆಟ್ಟಿ ಪೋಸ್ಟರ್ ರಿಲೀಸಾಗಿದೆ. ಬಿಳಿ ಬಣ್ಣದ ಪಂಚೆ ಹಾಗೂ ಅಂಗಿಯಲ್ಲಿ ಸುನೀಲ್ ಶೆಟ್ಟಿ ರಫ್ ಅಂಡ್ ಟಫ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಪೈಲ್ವಾನ್ ಒಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ ಆಕಾಂಕ್ಷ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.
ಅರ್ಜುನ್ ಜನ್ಯಾ ಸಂಗೀತವಿದ್ದು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಆಗಸ್ಟ್ 8 ಕ್ಕೆ ತೆರೆ ಕಾಣಲಿದೆ.
