‘ನನ್ನ ಚಿತ್ರರಂಗದ ಡೆಬ್ಯೂ ಆಗಿದ್ದು ವಜ್ರೇಶ್ವರಿ ಕಂಬೈನ್ಸ್ ಮೂಲಕ, ಈಗ ಅದೇ ಸಂಸ್ಥೆ ಮುಖಾಂತರ ಕಿರುತೆರೆಯಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ಮಾಡುವ ಪಾತ್ರ ವಿಭಿನ್ನವಾಗಿರಬೇಕು ಅನ್ನೋದು ನನ್ನ ನಂಬಿಕೆ, ಅದೇ ರೀತಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂದು ಸ್ಪೆಷಲ್ ಅಪಿಯರೆನ್ಸ್ ಎನ್ನಬಹುದು’ ಎನ್ನುತ್ತಾರೆ ಸುಮನ್ ನಗರ್‌ಕರ್. ಸೀತೆ ಯಾರು ಎನ್ನುವಗೊಂದಲ ಬಿಡಿಸುವ ಅನುಷ್ಕಾ ರಾಥೋಡ್ ಎಂಬ ಮನಃ ಶಾಸ್ತ್ರಜ್ಞೆಯ ಪಾತ್ರದಲ್ಲಿ ಸುಮನಾ ಕಾಣಿಸಿಕೊಳ್ಳಲಿದ್ದಾ.

ನಾನು ಮಾಡುವ ಪಾತ್ರ ವಿಭಿನ್ನವಾಗಿರ ಬೇಕು ಅನ್ನೋದು ನನ್ನ ನಂಬಿಕೆ, ಅದೇ ರೀತಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.-  ಸುಮನ್ ನಗರ್‌ಕರ್

‘25 ವರ್ಷದ ಹಿಂದೆ ‘ಕಲ್ಯಾಣ ಮಂಟಪ’ ಸಿನಿಮಾದಲ್ಲಿ ನನ್ನ ತಂಗಿ ಪಾತ್ರದಲ್ಲಿ ಸುಮನ್ ನಗರ್‌ಕರ್ ನಟಿಸಿದ್ರು. ನಂತರ ಅನೇಕ ಸಿನಿಮಾಗಳನ್ನು ಮಾಡಿ ಯಶಸ್ಸು ಗಳಿಸಿದರು, ಮನೆಮಾತಾದರು. ಈಗ ಅವರದೇ ಮನೆ ಧಾರಾವಾಹಿ ಎನ್ನುವಷ್ಟು ಪ್ರೀತಿಯಿಂದ ‘ಮರಳಿ ಬಂದಳು ಸೀತೆ’ಯಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಧಾರಾವಾಹಿಗೆ ದೊಡ್ಡ ತಿರುವು ನೀಡಲಿದೆ. ಅವರಿಗೆ ಒಳ್ಳೆಯದಾಗಲಿ, ಅವರಿಂದ ನಮ್ಮ ಧಾರಾವಾಹಿಗೆ ಉತ್ತಮ ಸ್ಪಂದನೆ ಮುಂದುವರೆಯಲಿ ಎಂದು’ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಹೇಳಿದರು.

ದೊಡ್ಡ ಕಲಾವಿದೆ ಯೊಬ್ಬರು ನಮ್ಮ ಧಾರಾವಾಹಿಯಲ್ಲಿ ನಟಿಸುತ್ತಿರುವುದು ನಮಗೆಲ್ಲಾ ಖುಷಿ ತಂದಿದೆ.- ಎಸ್. ಗೋವಿಂದ್, ನಿರ್ದೇಶಕ

‘ದೊಡ್ಡ ಕಲಾವಿದೆಯೊಬ್ಬರು ನಮ್ಮ ಧಾರಾವಾಹಿಯಲ್ಲಿ ನಟಿಸುತ್ತಿರುವುದು ನಮಗೆಲ್ಲಾ ಖುಷಿ ತಂದಿದೆ. ಉತ್ತಮ ಕತೆ, ಒಳ್ಳೆಯ ಬ್ಯಾನರ್, ಒಳ್ಳೆಯ ಚಾನೆಲ್ ಮೂಲಕ ಸುಮನ್ ನಗರ್‌ಕರ್ ಕಿರುತೆರೆಗೆ ಬಂದಿರುವುದು ಸಂತೋಷ’ ಎನ್ನುತ್ತಾರೆ ನಿರ್ದೇಶಕ ಎಸ್. ಗೋವಿಂದ್. ಸುಮನ್ ನಗರ್‌ಕರ್ ಪ್ರವೇಶದಿಂದ ಸೀತೆ ಪಾತ್ರ ಮತ್ತು ಧಾರಾವಾಹಿಯ ಕತೆ ದೊಡ್ಡ ತಿರುವು ಪಡೆಯಲಿದೆ. ‘ಮರಳಿ ಬಂದಳು ಸೀತೆ’ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 7ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

25 ವರ್ಷದ ಹಿಂದೆ ‘ಕಲ್ಯಾಣ ಮಂಟಪ’ ಚಿತ್ರದಲ್ಲಿ ನನ್ನ ತಂಗಿ ಪಾತ್ರದಲ್ಲಿ ಸುಮನ್ ನಗರ್‌ಕರ್ ನಟಿಸಿದ್ರು. ಈಗ ‘ಮರಳಿ ಬಂದಳು ಸೀತೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. - ರಾಘವೇಂದ್ರ ರಾಜಕುಮಾರ್ ನಿರ್ಮಾಪ