ಡಿ.8 ರಂದು 27ನೇ ಮದುವೆ ವಾರ್ಷಿಕೋತ್ಸವದಲ್ಲಿ ಅಂಬಿಯನ್ನು ನೆನೆದು ಪತ್ರ ಬರೆದ ಸುಮಲತಾ, ಇದೀಗ ಮತ್ತೆ ಪತಿಯನ್ನು ನೆನೆದು ಭಾವುಕರಾಗಿದ್ದಾರೆ. ವಿಶೇಷ ವ್ಯಕ್ತಿಯೊಬ್ಬರು ಮೈಕಲ್ ಜ್ಯಾಕ್ಸನ್ ಹಾಡನ್ನು ಸುಮಲತಾಗೆ ಕಳುಹಿಸಿ, ಪತಿಯನ್ನು ಮತ್ತೊಮ್ಮೆ ನೆನೆಯುವಂತೆ ಮಾಡಿದ್ದಾರೆ.

ಗುಣ ರೆಬೆಲ್ ಆದರೂ ಮನಸ್ಸು ಮಾತ್ರ ಎಂಥವರನ್ನೂ ಮೆಚ್ಚಿಸುವಂತದ್ದು, ಪ್ರೀತಿಸಿ, ಕೈ ಹಿಡಿದ ಮಡದಿ ಇಂದಿಗೂ ಅಂಬಿಯನ್ನು ನೆನೆಪಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡುತ್ತಲೇ ಇದ್ದಾರೆ. ಅಲ್ಲದೇ ರಾಕಿಂಗ್ ಸ್ಟಾರ್ ಯಶ್‌ಗೂ ಕರೆ ಮಾಡಿ 'ಸ್ವರ್ಗದಿಂದ ನಿನ್ನ ಮಗಳಿಗೆ ಗಿಫ್ಟ್ ಬಂದಿದೆ, ನಿನ್ನ ಮಗಳು ಎಷ್ಟು ಲಕ್ಕಿ?' ಎಂದು ರಾಧಿಕಾ-ಯಶ್ ಮಗಳಿಗೆ ಅಂಬರೀಷ್ ಬುಕ್ ಮಾಡಿರುವ ತೊಟ್ಟಿಲ ಬಗ್ಗೆಯೂ ಹೇಳಿದ್ದರು.

ಟ್ವಿಟರ್ ಖಾತೆಯಲ್ಲಿ ಆ್ಯಕ್ಟಿವ್ ಇರುವ ಸುಮಲತಾ, ಪ್ರತಿಯೊಬ್ಬ ಫ್ಯಾನ್ ಮೆಸೇಜ್‌ಗೂ ರಿಪ್ಲೈ ಮಾಡುತ್ತಾರೆ. ಆದರೆ, ಇಲ್ಲೊಂದು ಟ್ಟೀಟ್ ಮೂಲಕ ಮತ್ತೆ ಅಂಬಿಯನ್ನು ನೆನೆದು, ಕಣ್ಣೀರಿಟ್ಟಿದ್ದಾರೆ. ಆ್ಯನಿವರ್ಸರಿಯ ದಿನದಂದು ತಮ್ಮ ಕುಟುಂಬ ಇಷ್ಟ ಪಡುವ 'ಅವರ್ ಫ್ಯಾಮಿಲಿ ಫೇವ್' ಎಂದು ತಾಯಿಗೊಬ್ಬ ಕರ್ಣ ಚಿತ್ರದ 'ಅಂದ ಚಂದ ತಂದ ಕಲ್ಪನಾ...' ಹಾಡನ್ನೂ ಶೇರ್ ಮಾಡಿಕೊಂಡಿದ್ದಾರೆ.

 

'ನನ್ನ ಡಿಯರ್ ಫ್ರೆಂಡ್ ಕಳುಹಿಸಿದ ಹಾಡಿದು....ಬಹುಶಃ ಅಂಬಿಯೇ ನನಗೆ ಕಳುಹಿಸಿದಂತಿದೆ...." ಎಂದು ಹಾಡಿನ ಲಿಂಕ್ ಹಾಕಿ, ಮತ್ತೆ ಮರೆಯಾದ ಕಲಿಯುಗದ ಕರ್ಣನನ್ನು ನೆನಪಿಸಿಕೊಂಡಿದ್ದಾರೆ ಪತ್ನಿ ಸುಮಲತಾ.