ಆಕಾಶದಲ್ಲಿ ರೆಬೆಲ್ 'ಸ್ಟಾರ್' ಕಾಣುವಂತಾಗಿ ಇಂದಿಗೆ (ಡಿ.24) ಹದಿನೈದು ದಿನಗಳಾಗಿವೆ. ಪತಿಯಿಲ್ಲದ ನೋವನ್ನು ಸುಮಲತಾ ಇನ್ನೂ ಅರಗಿಸಿಯೇ ಕೊಂಡಿಲ್ಲ. ಹುಲಿಯಂತಿದ್ದ, ಮೃದು ಹೃದಯಿ, ಉತ್ತಮ ಸ್ನೇಹಿತ ಅಂಬಿಯನ್ನು ತಮ್ಮ 27ನೇ ವೈವಾಹಿಕ ವಾರ್ಷಿಕೋತ್ಸವದಲ್ಲಿ ಸುಮಲತಾ ನೆನೆದು, ಪ್ರೀತಿಯ ಪತಿಗೆ ಸೋಷಿಯಲ್ ಮೀಡಿಯಾದಲ್ಲೊಂದು ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಒಕ್ಕಣಿಕೆ ಹೀಗಿದೆ...

‘ನನ್ನ ನಲ್ಮೆಯ, ಪ್ರೀತಿಯ ಅ..., 
 27 ವರ್ಷಗಳಲ್ಲಿ ಇದೇ ಮೊದಲ ಸಲ ಡಿಸೆಂಬರ್ 8ರಂದು ನನ್ನೊಂದಿಗೆ ನೀವಿಲ್ಲ....ನೀವು ನನ್ನ ಪ್ರಪಂಚವಾಗಿದ್ರಿ, ನನ್ನನ್ನೂ ಸಂಬಾಳಿಸಿ, ಕೋಟ್ಯಾಂತರ ಮಂದಿಯ ಸ್ನೇಹಿವನ್ನೂ ಗಿಟ್ಟಿಸಿ, ಪ್ರೀತಿ ಹಂಚುವ ಶಕ್ತಿ ನಿಮಗೆ ಮಾತ್ರ ಇರುವುದು. ನಿಮ್ಮನ್ನು ಪ್ರೀತಿಸಲು ಆರಂಭಿಸಿದ ದಿನವೇ ನನ್ನ ಹೊಸ ಬಾಳು ಆರಂಭವಾಯಿತು. ಅಂದಿನಿಂದಲೂ ನನ್ನನ್ನು ಹಾಗೂ ನನ್ನ ಪ್ರೀತಿಯನ್ನು ಸಲಹಿದ್ದೀರಿ. ಚಳಿಯಲ್ಲಿ ಬೆಚ್ಚಗಿನ ಕಂಬಳಿಯಂತೆ, ಬಿಸಿಲಲ್ಲಿ ತಂಪೆಗೆರುವ ಛತ್ರಿಯಂತೆ ನನ್ನೊಂದಿಗೆ ಇದ್ರಿ. 

ನಂಗೆ ಗೊತ್ತು ನೀವೀಗ ಎಲ್ಲಿಯೇ ಇದ್ದರೂ ನಾನು, ನನ್ನ ಮಗನ ಬಗ್ಗೆಯೇ ಚಿಂತಿಸುತ್ತಿರುತ್ತೀರಿ. ಅದು ನನ್ನ ಸುತ್ತ ಇರೋ ಜನರ ಆಶೀರ್ವಾದ ಮೂಲಕ ನನ್ನ ಅರಿವಿಗೆ ಬರುತ್ತಿದೆ.  ನಮ್ಮನ್ನು ಪ್ರೀತಿಸಿದ ಪ್ರತಿಯೊಬ್ಬರನ್ನೂ ನಿಮ್ಮಂತೆಯೇ ಕಾಪಾಡಿಕೊಳ್ಳುವ ಶಕ್ತಿ ಆ ದೇವರು ನಮಗೆ ಕೊಡಲಿ. 

ಸಿಂಹದಂಥ ಹೃದಯಿ, ಅದ್ಭುತ ಮಾನವೀಯ ಹೃದಯಿಯೊಂದಿಗೆ ನಾನು 27 ವರ್ಷಗಳ ಕಾಲ ಕಳೆದೆನೆಂದು ಹೆಮ್ಮೆಯಿಂದ ಹೇಳಿ ಕೊಳ್ಳುವೆ. ಅಂಬಿಯಂಥವರು ಕೋಟಿಗೊಬ್ಬರು ಮಾತ್ರ ಸಿಗೋದು. ನಮ್ಮೊಂದಿಗೆ ಸದಾ ಇರಿ, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ....' ಎಂದು ಬರೆದು ಅಗಲಿದ ಪತಿದೇವನಿಗೆ ಅಕ್ಷರದ ಮೂಲಕ ಕಂಬನಿ ಮಿಡಿದಿದ್ದಾರೆ ಪತ್ನಿ ಸುಮಲತಾ.

 

ಪತ್ನಿಯೊಂದಿಗೆ ಅಂಬಿ ಡ್ಯಾನ್ಸ್..ವಿಡಿಯೋ ವೈರಲ್

ಅಂಬಿ ಮೊಬೈಲ್‌ನಲ್ಲಿ ದೇವತೆ: ಕರೆ ಬಂದ್ರೆ ಎಲ್ಲವಕ್ಕೂ ಚಕ್ಕರ್!

"