ಬೆಂಗಳೂರು (ಡಿ. 03): ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಸಾವು ಇನ್ನೂ ಅರಗಿಸಿಕೊಳ್ಳಲಾಗದ ಕಹಿ ಸತ್ಯ. ಇಡೀ ದೇಶವೇ ಮುಮ್ಮಲ ಮರುಗಿದೆ. ಅಗಲಿದ ನಾಯಕನನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಅಭಿಮಾನಿಗಳು. ಲಕ್ಷಾಂತರ ಮಂದಿ ಅಂತಿಮ ದರ್ಶನ ಪಡೆದಿದ್ದಾರೆ. ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಸಂತಾಪ ಸೂಚಿಸಿದ್ದಾರೆ. 

ಪ್ರಧಾನಿ ಮೋದಿಯವರು ಅಂಬರೀಶ್ ಸಾವಿಗೆ ಸಂತಾಪ ಸೂಚಿಸಿದ್ದರು. ತಮ್ಮ ಅದ್ಭುತ ನಟನೆಯಿಂದ ಅಂಬರೀಶ್ ಜನ ಮಾನಸದಲ್ಲಿ ನೆಲೆಸಿದ್ದಾರೆ. ಕೇವಲ ಸಿನಿಮಾ ರಂಗ ಮಾತ್ರವಲ್ಲ, ರಾಜಕೀಯಕ್ಕೂ ಕೊಡುಗೆ ಸಲ್ಲಿಸಿದ್ದಾರೆ. ರಾಜಕೀಯದಲ್ಲಿ ಸದಾ ಸಕ್ರಿಯರಾಗಿದ್ದು ರಾಜ್ಯದ ಅಭಿವೃದ್ಧಿಗಾಗಿ ರಾಜ್ಯ ಮಟ್ಟದಲ್ಲಿ, ಕೇಂದ್ರ ಮಟ್ಟದಲ್ಲೂ ಶ್ರಮಿಸಿದ್ದಾರೆ. ಅವರ ಸಾವು ನೋವು ತಂದಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಆ ಭಗವಂತ ನೀಡಲಿ ಎಂದು ಸಾಂತ್ವನ ಹೇಳಿ ಮೋದಿ ಟ್ವೀಟ್ ಮಾಡಿದ್ದರು. 

 


ಮೋದಿ ಟ್ವೀಟ್ ಗೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೈ ಮುಗಿಯುವ ಇಮೋಜಿ ಹಾಕುವ ಮೂಲಕ ನಮನ ಸಲ್ಲಿಸಿದ್ದಾರೆ. 

ಅದೇ ರೀತಿ ತಮ್ಮ ಸಂಕಷ್ಟದಲ್ಲಿ ಬಾಗಿಯಾದ ಎಲ್ಲರಿಗೂ ನಮನ ಸಲ್ಲಿಸಿದ್ದಾರೆ.