Asianet Suvarna News Asianet Suvarna News

ಕನ್ನಡ ಬಿಗ್ ಬಾಸ್'ನಿಂದ ಈ ವಾರ ಗಯ್ಯಾಳಿ ಹುಡುಗಿ ಔಟ್

ಈ ವಾರ ಹೊರಬಿದ್ದಿರುವ ಸುಕೃತಾ ವಾಗ್ಲೆ ಅವರು ನಟಿಯಾಗಿದ್ದು, ಕಿರುಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಆಕೆ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಜಟ್ಟ, ಬಹುಪರಾಕ್ ಸಿನಿಮಾಗಳಲ್ಲೂ ಆಕೆ ನಟಿಸಿದ್ದಾರೆ.

sukrutha wagle exit from kannda bigg boss 4

ಬೆಂಗಳೂರು(ಡಿ. 17): ನಾಲ್ಕನೇ ಸೀಸನ್'ನ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ಸುಕೃತಾ ವಾಗ್ಲೆ ಔಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಎರಡು ವಾರದ ಹಿಂದೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಸುಕೃತಾ ವಾಗ್ಲೆ ಹೊರಬಿದ್ದಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದರೊಂದಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಮೂರೂ ಕಂಟೆಸ್ಟೆಂಟ್'ಗಳು ಬಿಗ್ ಬಾಸ್ ಮನೆಯಿಂದ ಹೊರಬಂದಂತಾಗಿದೆ. ಓಂಪ್ರಕಾಶ್ ರಾವ್ ಹಾಗೂ ಮಸ್ತಾನ್ ಅವರು ಈ ಮುಂಚೆ ಹೊರಹೋದ ವೈಲ್ಡ್ ಕಾರ್ಟ್ ಎಂಟ್ರಿಗಳಾಗಿದ್ದಾರೆ. ಈ ಮೂವರಲ್ಲದೇ ಇನ್ನೂ 5 ಕಂಟೆಸ್ಟೆಂಟ್'ಗಳು ಬಿಗ್ ಬಾಸ್ ಮನೆಯಿಂದ ಎಕ್ಸಿಟ್ ಆಗಿದ್ದಾರೆ.

ಗಯ್ಯಾಳಿ ಹುಡುಗಿ?
ಈ ವಾರ ಹೊರಬಿದ್ದಿರುವ ಸುಕೃತಾ ವಾಗ್ಲೆ ಅವರು ನಟಿಯಾಗಿದ್ದು, ಕಿರುಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಆಕೆ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಜಟ್ಟ, ಬಹುಪರಾಕ್ ಸಿನಿಮಾಗಳಲ್ಲೂ ಆಕೆ ನಟಿಸಿದ್ದಾರೆ.

ಸದ್ಯ ಉಳಿದುಕೊಂಡಿರುವ ಬಿಗ್ ಬಾಸ್ ಸ್ಪರ್ಧಿಗಳು:
ಪ್ರಥಮ್, ರೇಖಾ, ಮೋಹನ್, ಕಾರುಣ್ಯ, ಸಂಜನಾ, ಭುವನ್, ಪ್ರಥಮ್, ಶೀತಲ್ ಶೆಟ್ಟಿ, ಶಾಲಿನಿ, ಕಿರಿಕ್ ಕೀರ್ತಿ ಮತ್ತು ಮಾಳವಿಕಾ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ.

ವಾಣಿಶ್ರೀ, ದೊಡ್ಡ ಗಣೇಶ್, ಕಾವ್ಯ ಶಾಸ್ತ್ರಿ, ಚೈತ್ರಾ, ನಿರಂಜನ್ ದೇಶಪಾಂಡೆ, ಓಂಪ್ರಕಾಶ್, ಮಸ್ತಾನ್ ಮತ್ತು ಸುಕೃತಾ ವಾಗ್ಲೆ ಅವರು ಮನೆಯಿಂದ ಹೊರಬಿದ್ದ ಕಂಟೆಸ್ಟೆಂಟ್ಸ್ ಆಗಿದ್ದಾರೆ. ಕಾರುಣ್ಯ ರಾಮ್ ಅವರು ಮನೆಯಿಂದ ಹೊರಬಿದ್ದು ಕೆಲ ವಾರಗಳ ಬಳಿಕ ರೀ-ಎಂಟ್ರಿ ಪಡೆದುಕೊಂಡಿದ್ದಾರೆ.

Follow Us:
Download App:
  • android
  • ios