ಅಂಬಿ ನಿಂಗೆ ವಯಸ್ಸಾಯ್ತೋ ನಂತರ ಇನ್ನೊಂದು ಚಿತ್ರ ಮಾಡ್ತಾ ಇದ್ದಾರೆ ಕಿಚ್ಚ

First Published 18, Mar 2018, 9:58 PM IST
Sudeep up coming Movie
Highlights

ರೆಬೆಲ್ ಸ್ಟಾರ್ ಅಂಬರೀಶ್ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ ಸಿನಿಮಾ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೊದಲ ಟೀಸರ್ ಇಂದು ರಿವೀಲ್ ಆಗಿದ್ದು, ಯುಗಾದಿ ಹಬ್ಬದ ಅಂಗವಾಗಿ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ. ಈ ಚಿತ್ರದಲ್ಲಿ ಅಂಬರೀಶ್ ಮಾತ್ರ ಅಲ್ಲ, ಕಿಚ್ಚು ಸುದೀಪ್ ಅಭಿನಯಿಸಿದ್ದಾರೆ. ಗುರುದತ್ ಗಾಣಿಗಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಾಕ್ ಮಂಜು ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. 

ಬೆಂಗಳೂರು (ಮಾ. 18):  ರೆಬೆಲ್ ಸ್ಟಾರ್ ಅಂಬರೀಶ್ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ ಸಿನಿಮಾ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೊದಲ ಟೀಸರ್ ಇಂದು ರಿವೀಲ್ ಆಗಿದ್ದು, ಯುಗಾದಿ ಹಬ್ಬದ ಅಂಗವಾಗಿ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ. ಈ ಚಿತ್ರದಲ್ಲಿ ಅಂಬರೀಶ್ ಮಾತ್ರ ಅಲ್ಲ, ಕಿಚ್ಚು ಸುದೀಪ್ ಅಭಿನಯಿಸಿದ್ದಾರೆ. ಗುರುದತ್ ಗಾಣಿಗಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಾಕ್ ಮಂಜು ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ..

ಕಿಚ್ಚು ಸುದೀಪ್ ಹಾಗೂ ನಿರ್ದೇಶಕ ಕೃಷ್ಣ ಕಾಂಬಿನೇಷನ್ ನಲ್ಲಿ ‘ಪೈಲ್ವಾನ್ ' ಚಿತ್ರ ಮೂಡಿ ಬರ್ತಿದೆ. ಯುಗಾದಿ ಹಬ್ಬದ ವಿಶೇಷವಾಗಿ ನಿರ್ದೇಶಕ ಕೃಷ್ಣ ನೇತೃತ್ವದಲ್ಲಿ ಹನುಮಂತನಗರದ ರಾಮಾಂಜನೇಯ ದೇವಸ್ಥಾನದಲ್ಲಿ ಇಂದು ಮುಹೂರ್ತ ಫಿಕ್ಸ್​ ಮಾಡಲಾಗಿದೆ. ಸುದೀಪ್ ಪೈಲ್ವಾನ್ ಆಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಕಿಚ್ಚನ ಪತ್ನಿ ಪ್ರಿಯಾ ಸುದೀಪ್ ಕ್ಲಾಫ್ ಮಾಡಿದ್ದಾರೆ. ನಿರ್ದೇಶಕ ಕೃಷ್ಣ ಅವರ ಪತ್ನಿ ಸ್ವಪ್ನ ಕೃಷ್ಣ ಕೂಡ ಈ ಸಿನಿಮಾವನ್ನ  ನಿರ್ಮಾಣ ಮಾಡ್ತಾ ಇದ್ದಾರೆ. ಮುಂದಿನ ತಿಂಗಳಿಂದ ಪೈಲ್ವಾನ್ ಚಿತ್ರ ಶೂಟಿಂಗ್​ ಆರಂಭವಾಗಲಿದೆ.

 

loader