ಅಭಿಮಾನಿಗಳು ಸೇರಿದಂತೆ ದಿಗ್ಗಜ ಆಟಗಾರರು ಕೂಡ ಬೆಂಗಳೂರಿಗರ ಆಟದ ಬಗ್ಗೆ ಕಿಡಿಕಾರಿದ್ದಾರೆ. ಇವುಗಳ ಮಧ್ಯೆ ಸ್ಯಾಂಡಲ್'ವುಡ್ ಸ್ಟಾರ್ ಕಿಚ್ಚ ಸುದೀಪ್ ಕೂಡ ಬೆಂಗಳೂರು ತಂಡದ ಆಟದ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರು(ಮೇ.10): ಐಪಿಎಲ್ ಇತಿಹಾಸದಲ್ಲಿ ಆರ್'ಸಿಬಿ ಈ ಬಾರಿ ಅತ್ಯಂತ ಕಳಪೆ ಸಾಧನೆ ಮಾಡಿದೆ. ಈಗಾಡಿರುವ 13 ಪಂದ್ಯಗಳಲ್ಲಿ 10ರಲ್ಲಿ ಸೋತು 2ರಲ್ಲಿ ಮಾತ್ರ ಜಯಗಳಿಸಿದೆ. ಒಂದು ಡ್ರಾನಲ್ಲಿ ಅಂತ್ಯಗೊಂಡಿದೆ.

ಅಭಿಮಾನಿಗಳು ಸೇರಿದಂತೆ ದಿಗ್ಗಜ ಆಟಗಾರರು ಕೂಡ ಬೆಂಗಳೂರಿಗರ ಆಟದ ಬಗ್ಗೆ ಕಿಡಿಕಾರಿದ್ದಾರೆ. ಇವುಗಳ ಮಧ್ಯೆ ಸ್ಯಾಂಡಲ್'ವುಡ್ ಸ್ಟಾರ್ ಕಿಚ್ಚ ಸುದೀಪ್ ಕೂಡ ಬೆಂಗಳೂರು ತಂಡದ ಆಟದ ಬಗ್ಗೆ ಮಾತನಾಡಿದ್ದಾರೆ. ಕಿಚ್ಚನ ಅಭಿಮಾನಿಯೊಬ್ಬ ಬೆಂಗಳೂರು ತಂಡವನ್ನು ಸುದೀಪ್ ನಾಯಕತ್ವದ ಸಿಸಿಎಲ್'ನ ಕರ್ನಾಟಕ ಬುಲ್ಡೋಜರ್ಸ್ ತಂಡ ಕೂಡ ಸುಲಭವಾಗಿ ಸೋಲಿಸಬಹುದು ಎಂದು ವ್ಯಂಗ್ಯ ಮಾಡಿದ್ದ.

ಇದಕ್ಕೆ ಪ್ರತಿಕ್ರಿಯಿಸಿದ 'ಕಿಚ್ಚ' ಈ ಸಂದರ್ಭಗಳಲ್ಲಿ 'ನಾವು ನಮ್ಮ ಹೀರೊಗಳ ಪರ ನಿಲ್ಲಬೇಕು ಗೆಳಯ.ಚೆನ್ನಾಗಿ ಆಡುವಾಗ ಅವರನ್ನು ಹೊಗಳಿ ಕೆಟ್ಟ ಸಮಯದಲ್ಲಿ ಅವರನ್ನು ನಿಂದಿಸುವುದು ಮಾನವೀಯತೆಯಲ್ಲ' ಎಂದು ಆರ್'ಸಿಬಿ ಆಟಗಾರರ ಪರ ನಿಂತಿದ್ದಾರೆ.