ಈ ಬಗ್ಗೆ ಸುದೀಪ್'ರನ್ನು ಮಾಧ್ಯಮದವರು ಪ್ರಶ್ನಿಸಿದಾಗ 'ನೋ ಕಾಮೆಂಟ್ಸ್' ಎಂದು ಉತ್ತರಿಸಿದ್ದರು.ಆದರೆ ಟ್ವಿಟರ್'ನಲ್ಲಿ ಮಾತ್ರ ಕಿಚ್ಚ ಫುಲ್ ಬ್ಯುಸಿಯಾಗಿ ಟ್ವೀಟ್'ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಬೆಂಗಳೂರು(ಮಾ.06): ಸಿನಿಮಾಗೆ ಅವಕಾಶ ನೀಡಿದ್ದು ನಾನು, ದರ್ಶನ್ ಕ್ಲಾಪ್ ಬಾಯ್ ಆಗಿದ್ದರು ಎಂಬ ಸುದೀಪ್ ಅವರ ಹಳೆಯ ಸಂದರ್ಶನದ ಮಾತಿಗೆ ಕೋಪಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ನಮ್ಮಿಬ್ಬರ ಸ್ನೇಹ ಮುಗಿದ ಕಥೆ' ಎಂದು ಟ್ವೀಟ್ ಆರಂಭಿಸಿ ಸ್ನೇಹಕ್ಕೆ ಕಂಠಕವಾದ ದೃಶ್ಯಗಳನ್ನು ಟ್ವೀಟ್ ಮಾಡಿದ್ದರು.

ಈ ಬಗ್ಗೆ ಸುದೀಪ್'ರನ್ನು ಮಾಧ್ಯಮದವರು ಪ್ರಶ್ನಿಸಿದಾಗ 'ನೋ ಕಾಮೆಂಟ್ಸ್' ಎಂದು ಉತ್ತರಿಸಿದ್ದರು.ಆದರೆ ಟ್ವಿಟರ್'ನಲ್ಲಿ ಮಾತ್ರ ಕಿಚ್ಚ ಫುಲ್ ಬ್ಯುಸಿಯಾಗಿ ಟ್ವೀಟ್'ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಇವ್ಯಾವು ದರ್ಶನ್'ಗೆ ಸಂಬಂಧಿಸಿದ ಮಾತುಗಳಲ್ಲ. ತನ್ನ ಇತ್ತೀಚಿನ ಸಿನಿಮಾ ಹೆಬ್ಬಲಿ ಹಾಗೂ ಅಭಿಮಾನಿಗಳಿಗೆ ಕುರಿತಾದ ವಿಷಯಗಳು.

ಸುದೀಪರ ಹೆಬ್ಬುಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ರಾಜ್ಯದಾದ್ಯಂತ ಅಬ್ಬರಿಸುತ್ತಿದೆ. ಅವರು ಕೂಡ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಚಿತ್ರಮಂದಿರಗಳಿಗೆ ಭೇಟಿ ನೀಡಿ ಅಲ್ಲಿ ಹೆಬ್ಬುಲಿ ಸಿನಿಮಾಗೆ ವ್ಯಕ್ತವಾದ ಯಶಸ್ಸನ್ನು ಹಾಗೂ ಅಭಿಮಾನಿಗಳು ತಮ್ಮ ಮೇಲೆ ತೋರಿಸಿದ ಪ್ರೀತಿಯನ್ನು ಚಿತ್ರಗಳ ಸಮೇತ ಟ್ವಿಟರ್'ನಲ್ಲಿ ಹಂಚಿಕೊಂಡಿದ್ದಾರೆ.

ದರ್ಶ'ನ್'ಗೆ ಸಂಬಂಧಿಸಿದ ಯಾವುದು ಒಂದು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಕೊಂಡಿಲ್ಲ.