Asianet Suvarna News Asianet Suvarna News

‘ಪೈಲ್ವಾನ್‌’ ಚಿತ್ರದ ಕ್ಲೈಮ್ಯಾಕ್ಸಲ್ಲಿ ಕಿಚ್ಚನ ವಿಶ್ವರೂಪ ದರ್ಶನ

ಬಾಕ್ಸಿಂಗ್‌ ತರಬೇತಿಗೆ ಥಾಯ್‌ಲ್ಯಾಂಡ್‌ಗೆ ಹೊರಟ ಸುದೀಪ್‌

Sudeep to go to Thailand for boxing training

ಕಿಚ್ಚ ಸುದೀಪ್‌ ಈಗ ‘ಪೈಲ್ವಾನ್‌’ ಮೂಡ್‌ನಲ್ಲಿದ್ದಾರೆ. ಮುಂದಿನ ಚಿತ್ರಕ್ಕೆ ಫಿಟ್‌ ಆಗುತ್ತಿದ್ದಾರೆ. ಈಗಾಗಲೇ ಜಿಮ್‌ನಲ್ಲಿ ಕಿಚ್ಚನ ವರ್ಕೌಟ್‌ ಕರಸತ್ತು ಆರಂಭವಾಗಿದೆ. ಕುಸ್ತಿ, ಬಾಕ್ಸಿಂಗ್‌ ಹಾಗೂ ಮಾರ್ಷಲ್‌ ಆಟ್ಸ್‌ರ್‍ ವಿಶೇಷ ತರಬೇತಿಗೆ ಇದೇ ವಾರ ಥಾಯ್‌ಲ್ಯಾಂಡ್‌ಗೆ ಹೊರಟಿರುವುದು ಕುತೂಹಲ ಮೂಡಿಸಿದೆ. ಅಲ್ಲಿ ಫಿಕ್ಸ್‌ ಆಗಿರೋದು ಒಟ್ಟು ಮೂರು ವಾರಗಳ ಕಾಲ ಟ್ರೈನಿಂಗ್‌. ಎರಡು ತಿಂಗಳ ಅಂತರದಲ್ಲಿ ಈ ಟ್ರೈನಿಂಗ್‌ ನಡೆಯಲಿದೆ.

‘ವಿಲನ್‌’ ಹಾಗೂ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣ ನಡುವೆಯೇ ಸುದೀಪ್‌ ಥಾಯ್‌ಲ್ಯಾಂಡ್‌ಗೆ ಹೋಗಿ ಬರಲಿದ್ದಾರೆ. ಥಾಯ್‌ಲ್ಯಾಂಡ್‌ ಟ್ರೈನಿಂಗ್‌ ಪೂರ್ವಭಾವಿಯಾಗಿ ಸುದೀಪ್‌ ಈಗ ಜಿಮ್‌ನಲ್ಲಿ ಬೇಸಿಕ್‌ ವರ್ಕೌಟ್‌ ಶುರು ಮಾಡಿದ್ದಾರೆ. ಈಗಾಗಲೇ ಎರಡು ವಾರಗಳ ಕಾಲದ ವರ್ಕೌಟ್‌ ಮುಕ್ತಾಯದ ಹಂತಕ್ಕೆ ಬಂದಿದೆ. ಆರಂಭದಲ್ಲಿ ಸುದೀಪ್‌ ಹೈದರಾಬಾದ್‌ನಲ್ಲಿ ಜಿಮ್‌ ವರ್ಕೌಟ್‌ ಮಾಡಿದ್ದರು. ಆ ನಂತರ ಬೆಂಗಳೂರಿನ ಜೆಪಿ ನಗರದಲ್ಲಿರುವ ಖಾಸಗಿ ಜಿಮ್‌ನಲ್ಲಿ ಬೆವರು ಹರಿಸಿದರು. ಇನ್ನೇನು ಥಾಯ್‌ಲ್ಯಾಂಡ್‌ಗೆ ಹೋಗುವುದಷ್ಟೇ ಬಾಕಿ.

ಈ ಬಗ್ಗೆ ಪೈಲ್ವಾನ್‌ ಚಿತ್ರದ ನಿರ್ದೇಶಕ ಕೃಷ್ಣ ಹೇಳಿದ್ದಿಷ್ಟು:

1. ಚಿತ್ರದ ಪಾತ್ರಕ್ಕೆ ತಕ್ಕಂತೆ ಅವರು ಕುಸ್ತಿ, ಬಾಕ್ಸಿಂಗ್‌ ಹಾಗೂ ಮಾರ್ಷಲ್‌ ಆಟ್ಸ್‌ರ್‍ ತರಬೇತಿ ಪಡೆಯಬೇಕಿದೆ. ಅವೆಲ್ಲವೂ ಥಾಯ್‌ಲ್ಯಾಂಡ್‌ನಲ್ಲಿ ನಡೆಯಲಿವೆ. ಒಟ್ಟು ಮೂರು ವಾರಗಳ ಕಾಲ ಸಮಯ ಫಿಕ್ಸ್‌ ಆಗಿದೆ. ಅಲ್ಲಿ ನುರಿತ ಅನುಭವಿಗಳೇ ತರಬೇತಿ ನೀಡಲಿದ್ದಾರೆ. ಅಲ್ಲಿಗೆ ಹೋಗುವುದಕ್ಕೆ ಒಂದಷ್ಟುಸಿದ್ಧತೆ ಅಗತ್ಯ. ಅದರ ಭಾಗವಾಗಿಯೇ ಸುದೀಪ್‌ ಸರ್‌, ಈಗ ಎರಡು ವಾರಗಳ ಕಾಲ ಬೇಸಿಕ್‌ ಬಿಜ್‌ ವರ್ಕೌಟ್‌ ಮುಗಿಸಿದ್ದಾರೆ. ಇದೇ ವಾರ ಥಾಯ್‌ಲ್ಯಾಂಡ್‌ಗೆ ಹೋಗಲಿದ್ದಾರೆ.

2. ನಾವೀಗ ವಿಲನ್‌ ಚಿತ್ರೀಕರಣ ಮುಕ್ತಾಯವಾಗುವುದನ್ನೇ ಕಾಯುತ್ತಿದ್ದೇವೆ. ಅಂತಿಮವಾಗಿ ಮಾಚ್‌ರ್‍ ಕೊನೆಯ ವಾರದಲ್ಲಿ ಚಿತ್ರೀಕರಣ ಶುರುಮಾಡುವುದು ಖಚಿತ. ಆ ಹೊತ್ತಿಗೆ ಸುದೀಪ್‌ ಥಾಯ್‌ಲ್ಯಾಂಡ್‌ ಟ್ರೈನಿಂಗ್‌ ಕೂಡ ಒಂದು ಹಂತಕ್ಕೆ ಬರಲಿದೆ. ಅದು ಬಾಕಿಯಿದ್ದರೂ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಳ್ಳುತ್ತೇವೆ.

3. ಅವರ ಬಾಡಿ ಫಿಟ್‌ ಆಗಬೇಕಿರುವುದು ಕ್ಲೈಮ್ಯಾಕ್ಸ್‌ ಚಿತ್ರೀಕರಣಕ್ಕೆ. ಹೀಗಾಗಿ ಅವರ ಟ್ರೈನಿಂಗ್‌ ಮುಗಿಯುವ ಹೊತ್ತಿಗೆ ಚಿತ್ರದ ಉಳಿದ ಚಿತ್ರೀಕರಣ ಕೂಡ ಮುಗಿಯಲಿದೆ. ಅದೇ ಹೊತ್ತಿಗೆ ಸುದೀಪ್‌ ಥಾಯ್‌ಲ್ಯಾಂಡ್‌ ಟ್ರೈನಿಂಗ್‌ ಕೂಡ ಮುಗಿಯುತ್ತದೆ. ಆಗ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮಾಡಿಕೊಂಡರೆ ಸೂಕ್ತ ಎಂದುಕೊಂಡಿದ್ದೇವೆ.

ಇದೊಂದು ರೆಗ್ಯುಲರ್‌ ಸಿನಿಮಾ ಅಲ್ಲ. ಹೆಸರಿಗೆ ತಕ್ಕಂತೆ ಇಲ್ಲಿ ನಾಯಕ ಪೈಲ್ವಾನ್‌. ಆತನಿಗೆ ಕುಸ್ತಿ, ಬಾಕ್ಸಿಂಗ್‌, ಮಾರ್ಷಲ್‌ ಆಟ್ಸ್‌ರ್‍ ಗೊತ್ತಿರಬೇಕು. ಅವು ಗೊತ್ತಿರಬೇಕಾದ್ರೆ ಬಾಡಿ ಫಿಟ್‌ ಆಗಬೇಕು. ಸುದೀಪ್‌ ಸರ್‌ ಈಗ ಅದನ್ನೇ ಮಾಡುತ್ತಿದ್ದಾರೆ. ಅವರು ಬಾಡಿ ಫಿಟ್‌ ಮಾಡುವುದಕ್ಕೆ ಮೂರು ತಿಂಗಳ ಸಮಯ ಬೇಕಾಗಿದೆ. ಸದ್ಯಕ್ಕೀಗ ಬೇಸಿಕ್‌ ವರ್ಕೌಟ್‌ ಮುಗಿದು, ಥಾಯ್‌ಲ್ಯಾಂಡ್‌ ತರಬೇತಿಗೆ ಫಿಟ್‌ ಆಗಿದ್ದಾರೆ.

- ಕೃಷ್ಣ, ನಿರ್ದೇಶಕ

Follow Us:
Download App:
  • android
  • ios