ಬೆಂಗಳೂರು (ಜೂ. 12): ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜನ್ನು ಸ್ವೀಕರಿಸಿ, ವಿಡಿಯೋ ಅಪ್’ಲೋಡ್ ಮಾಡಿದ ನಂತರ ಕಿಚ್ಚ ಸುದೀಪ್ ತಾವೇ ಒಂದು ಚಾಲೆಂಜನ್ನು ಹುಟ್ಟು ಹಾಕಿದ್ದಾರೆ. 

ಪೈಲ್ವಾನ್ ಇನ್ ಯು ಎನ್ನುವ ಫಿಟ್ ನೆಸ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತಾವೂ, ತಮ್ಮ ಅಭಿಮಾನಿಗಳನ್ನು ಆರೋಗ್ಯಯುತವಾಗಿರಿಸಲು ಕಿಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 

 

 

ಸುದೀಪ್’ರ ಈ ಚಾಲೆಂಜನ್ನು ಸಾಕಷ್ಟು ಜನ ಒಪ್ಪಿಕೊಂಡು ಕಸರತ್ತು ನಡೆಸುತ್ತಿರುವ ಫೋಟೋವನ್ನು ಟ್ವಿಟರ್’ನಲ್ಲಿ ಅಪ್’ಲೋಡ್ ಮಾಡಿ ಕಿಚ್ಚನಿಗೆ ಬೆಂಬಲ ನೀಡಿದ್ದಾರೆ. 

ನಿರ್ದೇಶಕ ಕೃಷ್ಣ, ಕಾರ್ತಿಕ್ ಗೌಡ, ಅನೂಪ್ ಭಂಡಾರಿ, ಪವನ್ ಒಡೆಯರ್ ಸೇರಿದಂತೆ ಸಾಕಷ್ಟು ಜನ ಸಾಥ್ ನೀಡಿದ್ದಾರೆ.