ಇವತ್ತು ಕೌಟುಂಬಿಕ ನ್ಯಾಯಾಲಯದಲ್ಲಿ ನಟ ಸುದೀಪ್​ ದಂಪತಿಯ ವಿಚ್ಛೇದನಾ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭ ಹಾಜರಾಗಿದ್ದ ಸುದೀಪ್ ಪರ ವಕೀಲರು, ಸುದೀಪ್ ದಂಪತಿ ಒಂದಾಗುತ್ತಾರೆ ಎಂದು ಕೋರ್ಟ್`ಗೆ ಮಾಹಿತಿ ನೀಡಿದರು. ಈ ಸಂದರ್ಭ, ಮಧ್ಯಸ್ಥಿಕಾ ಕೇಂದ್ರಕ್ಕೆ ಹಾಜರಾಗುವಂತೆ ಸುದೀಪ್ ದಂಪತಿಗೆ ಕೌಟುಂಬಿಕ ನ್ಯಾಯಾಲಯ ಸೂಚನೆ ನೀಡಿದೆ.ಈ ಸಂದರ್ಭ 2 ತಿಂಗಳ ಕಾಲಾವಕಾಶಕ್ಕೆ ಸುದೀಪ್ ಪರ ವಕೀಲರು ಮನವಿ ಮಾಡಿದ್ದಾರೆ.

ಬೆಂಗಳೂರು(ಜ.09): ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಮುಂದಾಗಿದ್ದ ಕನ್ನಡದ ಖ್ಯಾತ ನಟ ಸುದೀಪ್ ದಂಪತಿ ಮತ್ತೆ ಒಂದಾಗಲು ಮುಂದಾಗಿದ್ದಾರಾ? ಹೌದು ಎನ್ನುತ್ತಿವೆ ವರದಿಗಳು.