ಸುದೀಪ್- ಆ್ಯಮಿ ಜಾಕ್ಸನ್ ಡುಯೆಟ್’ವೊಂದೇ ಬಾಕಿ; ಸದ್ಯದಲ್ಲೇ ವಿಲನ್ ತೆರೆಗೆ

First Published 25, Jun 2018, 1:08 PM IST
Sudeep and Amy Jackson to shoot a duet soon
Highlights

ಬಹುನಿರೀಕ್ಷಿತ ವಿಲನ್ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಕೆಲವು ಶೂಟ್’ಗಳು ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.  ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ನಡುವೆ ಡ್ಯುಯೆಟ್ ಸೀನ್ ಮಾತ್ರ ಬಾಕಿ ಇದ್ದು ಸದ್ಯದಲ್ಲೇ ಶೂಟಿಂಗ್ ಮಾಡಲಾಗುವುದು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. 

ಬೆಂಗಳೂರು (ಜೂ. 25): ಬಹುನಿರೀಕ್ಷಿತ ವಿಲನ್ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಕೆಲವು ಶೂಟ್’ಗಳು ಮಾತ್ರ ಬಾಕಿ ಉಳಿದಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 

ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ನಡುವೆ ಡ್ಯುಯೆಟ್ ಸೀನ್ ಮಾತ್ರ ಬಾಕಿ ಇದ್ದು ಸದ್ಯದಲ್ಲೇ ಶೂಟಿಂಗ್ ಮಾಡಲಾಗುವುದು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. 

ಸದ್ಯ ಸುದೀಪ್ ಕೋಟಿಗೊಬ್ಬ-3 ಶೂಟಿಂಗ್’ಗಾಗಿ ಯುರೋಪ್’ನಲ್ಲಿದ್ದಾರೆ. ಈ ವಾರ ಹಿಂತಿರುಗುವ ಸಾಧ್ಯತೆಯಿದೆ. ಅತ್ತ ಆ್ಯಮಿ ಜಾಕ್ಸನ್ ಕೂಡಾ ಬ್ಯುಸಿಯಾಗಿದ್ದು ಅವರೂ ಕೂಡಾ ಸದ್ಯದಲ್ಲೇ ಹಿಂತಿರುಗಲಿದ್ದಾರೆ. 

ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲು ಅನ್ನುವಂತೆ ದಿ ವಿಲನ್ ಚಿತ್ರ ತಂಡ ತನ್ನ ಟೀಸರ್ ರಿಲೀಸ್‌ಗೆ ಟಿಕೆಟ್ ದರ ನಿಗದಿ ಮಾಡಿದೆ. ಅದೂ ರು. 500. ಜೂನ್ 28ರಂದು ಜಿಟಿ ವರ್ಲ್ಡ್ ಮಾಲ್ ಮಾಲ್‌ನಲ್ಲಿ ಬಿಡುಗಡೆಯಾಗುವ ಟೀಸರ್ ಪ್ರದರ್ಶನಕ್ಕೆ ಈ ದರ ನಿಗದಿ ಮಾಡಲಾಗಿದೆ. ಇದರಿಂದ ಬಂದ ಹಣವನ್ನು ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ವಿತರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. 

 

 

loader