ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.
ಬೆಂಗಳೂರು(ನ.16): ನಿನ್ನೇ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದ 'ಹುಚ್ಚ' ವೆಂಕಟ್, ಕಳೆದ ಸೀಜನ್'ನಲ್ಲಿ ಮಾಡಿದಂತೆ ಈ ಬಾರಿಯೂ ಸರ್ಧಿಯೊಬ್ಬರ ಮೇಲೆ ಕೈ ಮಾಡಿ ಬಿಗ್ ಮನೆಯಿಂದ ಹೊರ ದಬ್ಬಿಸಿಕೊಂಡಿದ್ದಾರೆ.
ಕಳೆದ ಸೀಜನ್'ನಲ್ಲಿ ರವಿ ಮುರೂರು ಅವರ ಮೇಲೆ ಹಲ್ಲೆ ನಡೆಸಿದ್ದ 'ಹುಚ್ಚ' ವೆಂಕಟ್, ಸೀಜನ್4ರ ಸ್ಪರ್ಧಿ ಪ್ರಥಮ್'ಗೆ ರಕ್ತ ಬರುವಂತೆ ಹೊಡೆದು ಮನೆಯಿಂದ ಹೊರ ಬಂದಿದ್ದಾರೆ.
ಹುಚ್ಚ ವೆಂಕಟ್'ರನ್ನು ಬಿಗ್ ಬಾಸ್ ಮನೆಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ, ಜೊತೆಗೆ ಗಾರ್ಡ್'ಗಳ ಜೊತೆ ಬಿಗ್ ಮನೆಯೊಳಗೆ ಎಂಟ್ರಿ ಪಡೆದಿದ್ದರು. ಆದರೆ ಕೊನೆಯಲ್ಲಿ ಪ್ರಥಮ್ ಮೇಲೆ ಕೈ ಮಾಡಿದ್ದರು.
ಇದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್, ನಾನು ಈಗಷ್ಟೆ ಕಾರ್ಯಕ್ರಮವನ್ನು ನೋಡಿದೆ, ಅದರಲ್ಲಿ ಹಚ್ಚು ವೆಂಕಟ್ ಮಾಡಿರುವುದು ಅಕ್ಷಮ್ಯ ತಪ್ಪು, ನಾನು ಖಂಡಿತ ನ್ಯಾಯದ ಪರ ನಿಲ್ಲುತ್ತೇನೆ ಎಂದಿದ್ದಾರೆ.
'ನ್ಯಾಯ ಸಿಕ್ಕಿದ ನಂತರವೇ ಈ ಕಾರ್ಯಕ್ರಮದ ನಿರೂಪಕನಾಗಿ ಕಾಣಿಸಿಕೊಳ್ಳುವೆ, ಇದು ನನ್ನ ಪ್ರೇಕ್ಷಕರಿಗೆ ನಾನು ನೀಡುವ ಭರವಸೆ' ಎಂದಿರುವ ಕಿಚ್ಚ ಸುದೀಪ್, ಹುಚ್ಚ ವೆಂಕಟ್ ಬಿಗ್ ಬಾಸ್ ಮನೆಯೊಳಗೆ ಹೋಗಿ ಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ತಪ್ಪು, ಆತನಿಗೆ ಶಿಕ್ಷೆ ಆಗಲೇ ಬೇಕು ಎಂದು ಸುದೀಪ್ ಆಗ್ರಹಿಸಿದ್ದಾರೆ.
