ಸಾಮಾಜಿಕ ಜಾಲತಾಣಗಳಲ್ಲಿ ನಾಗೇಂದ್ರ ಪ್ರಸಾದ್ ಮತ್ತು ಶುಭಾಪೂಂಜ ಮದುವೆಯಾಗಿ ಹೊರ ಬರುತ್ತಿರುವ ಪೋಟೋ ವೈರಲ್ ಆಗಿದ್ದು, ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಹಾಸನ(ಅ.26): ಮತ್ತೆ ನಿರ್ದೇಶಕ ಕ್ಯಾಪ್ ತೊಟ್ಟಿರುವ ಸಿನಿ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಹೊಸ ಚಿತ್ರ ಶುರು ಮಾಡುವ ಮುನ್ನವೇ ಸುದ್ದಿಯಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಾಗೇಂದ್ರ ಪ್ರಸಾದ್ ಮತ್ತು ಶುಭಾಪೂಂಜ ಮದುವೆಯಾಗಿ ಹೊರ ಬರುತ್ತಿರುವ ಪೋಟೋ ವೈರಲ್ ಆಗಿದ್ದು, ಇವರಿಬ್ಬರು ಮದುವೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ಧಿ ಹಬ್ಬಿದೆ.
ಇನ್ನೂ ಈ ಹೆಸರಿಡದ ಚಿತ್ರದಲ್ಲಿ ವಿ.ನಾಗೇಂದ್ರ ಪ್ರಸಾದ್ ನಿರ್ದೇಶನದ ಜೊತೆಯಲ್ಲಿ ಬಣ್ಣ ಹಚ್ಚುತ್ತಿದ್ದು, ಹೀಗಾಗಿ ಸಿನಿಮಾದ ದೃಶ್ಯವೊಂದರಲ್ಲಿ ವಿ.ನಾಗೇಂದ್ರ ಪ್ರಸಾದ್ ಮತ್ತು ಶುಭಾಪೂಂಜ ಮದುವೆಯಾಗಿ ದೇವಾಲಯದಿಂದ ಹೊರ ಬರುತ್ತಿದ್ದು, ಈ ಪೋಟೋವನ್ನು ನೋಡಿದ ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದು ರಿಯಲ್ ಮದ್ವೆ ಅಲ್ಲ ರೀಲ್ ಗಾಗಿ ಮಾತ್ರ ಅನ್ನೋದು ಸದ್ಯದ ಮಾಹಿತಿ.
