ಕಿರುತೆರೆಯ ಖ್ಯಾತ ನಟ ಸುಬ್ಬಲಕ್ಷ್ಮೀ ಗುರುಮೂರ್ತಿ ಅಲಿಯಾಸ್ ಭವಾನಿ ಸಿಂಗ್ ತನ್ನ ಜೀವನದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತ ಮಾಡಿದ್ದಾರೆ.

'ಚರಣದಾಸಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಭವಾನಿ ಸಿಂಗ್ ಕೆಲ ದಿನಗಳ ಹಿಂದೆ ತನ್ನ ಜೀವದ ಗೆಳೆತಿ ಪಂಕಜಾ ಶಿವಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

View post on Instagram

ಪಂಕಜಾ ಹಾಗೂ ಭವಾನಿ ಸಿಂಗ್ 2 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದು ಗುರು ಹಿರಿಯರೊಡನೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋ ಹಾಗೂ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗುರುಮೂರ್ತಿ ಅಲಿಯಾಸ್ ಭವಾನಿ ಸಿಂಗ್ 'ಚರಣದಾಸಿ', ‘ಸುಬ್ಬಲಕ್ಷ್ಮಿ ಸಂಸಾರ' ಅಭಿನಯಿಸಿದ್ದು ಸದ್ಯಕ್ಕೆ 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

View post on Instagram