ರಾಧಿಕಾ ಪಂಡಿತ್ ಹಾಗೂ ಯಶ್ ಏನೇ ಮಾಡಿದರೂ ಕ್ರಿಯೇಟಿವ್‌ ಅನ್ನೋದು ಇದಕ್ಕೆ ನೋಡಿ. ತಮ್ಮ ಲವ್‌ ಸ್ಟೋರಿ, ಮದುವೆ ವಿಚಾರ, ಮಗಳ ಮೊದಲ ಫೋಟೋ ಹಾಗೂ ಆಕೆಯ ಹೆಸರು ಎಲ್ಲವನ್ನೂ ವಿಭಿನ್ನವಾಗಿ ರಿವೀಲ್ ಮಾಡಿದ್ದಾರೆ.

ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಯಶ್‌ ತಮ್ಮ ಮುದ್ದಾದ ಮಗಳಿಗೆ ‘ಐರಾ’ ಎಂದು ಹೆಸರಿಟ್ಟಿದ್ದಾರೆ. ಯಶ್‌ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಜೋಡಿಸಿ ಈ ಹೆಸರಿಟ್ಟಿರುವುದು ಒಂದು ವಿಶೇಷವಾದರೆ ಇದರ ಅರ್ಥ ಇನ್ನೊಂದು ವಿಶೇಷತೆ ಹೊಂದಿದೆ.

ಯಶ್-ರಾಧಿಕಾ ಮಗಳ ನಾಮಕರಣ ಹೇಗಿತ್ತು? ಚಿತ್ರಲೋಕ

ಭಾನುವಾರ ಸಂಜೆ ರಾಧಿಕಾ ಪಂಡಿತ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ನಾಮಕರಣದ ವಿಡಿಯೋದ ಜೊತೆಗೆ ಮಗಳ ಹೆಸರನ್ನೂ ಪ್ರಕಟಿಸಿದರು. ಬೆಳಗ್ಗೆಯಿಂದಲೇ ನಾಮಕರಣದ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದಿದ್ದು, ಸಿಂಹಲಗ್ನದಲ್ಲಿ ನಾಮಕರಣ ಶಾಸ್ತ್ರ ನೆರವೇರಿದೆ. ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ನಾಮಕರಣವಾದ ಬಳಿಕ ಮಗುವಿನ ಸ್ಪೆಷಲ್‌ ಫೋಟೋಶೂಟ್‌ ನಡೆದಿದೆ. ಆ ಬಳಿಕ ಸಾಮಾಜಿಕ ತಾಣದ ಮೂಲಕ ಅಭಿಮಾನಿಗಳಿಗೆ ಮಗಳ ಹೆಸರನ್ನು ದಂಪತಿ ತಿಳಿಸಿದೆ.

ಐರಾ ಅಥವಾ ಆಯ್ರಾ ಎಂಬ ಹೆಸರು ಬ್ರಿಟನ್ನಿನಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಅರೇಬಿಕ್‌ನಲ್ಲಿ ’ಐರಾ’ ಎಂದರೆ ‘ಕಣ್ಣು ತೆರೆಸುವವರು’ ಅಥವಾ ‘ಗೌರವಾನ್ವಿತರು’ ಎಂದರ್ಥ ಹಾಗೂ ಕನ್ನಡದಲ್ಲಿ 'ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ' ಎಂದರ್ಥ .

ಸೋಶಿಯಲ್ ಮಿಡಿಯಾದಲ್ಲಿ ಮಗಳ ಫೋಟೋ ಅಪ್ಲೋಡ್ ಮಾಡುವಾಗ 'Baby YR' ಎಂದೇ ಈ ತಾರಾ ದಂಪತಿ ಬಳಸುತ್ತಿದ್ದರು. ಮುದ್ದು ಮಗಳ ಹೆಸರನ್ನು AYRA ಎಂದಿಟ್ಟಿದ್ದು, ನಡುವಿನಲ್ಲಿ YR ಎಂದಿದೆ. ಅಷ್ಟೇ ಅಲ್ಲ ರಾ (ರಾಧಿಕಾ) ಹಾಗೂ ಯ (ಯಶ್) ಅಕ್ಷರಗಳೂ ಇದೆ. ಹೆಸರನ ಬಗ್ಗೆ ಮೊದಲೇ ಸುಳಿವು ಕೊಟ್ಟಿದ್ದರು ಈ ಜೋಡಿ.