Asianet Suvarna News Asianet Suvarna News

ಬಾಹುಬಲಿಯ ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಮೊದಲು ಸಂಪರ್ಕಿಸಿದ್ದು ಯಾರನ್ನು ಗೊತ್ತೇ? ಇವರ ಸಂಭಾವನೆ ಕೇಳಿ ನಿರ್ದೇಶಕ ದಂಗು!

ಬಾಹುಬಲಿ-2 ಭಾರೀ ಯಶಸ್ಸಿನೊಂದಿಗೆ ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿದೆ. ಜಗತ್ತಿನಲ್ಲಿ 1000 ಕೋಟಿ ಗಳಿಸಿದ ಭಾರತದ ಮೊದಲ ಚಿತ್ರ ಇದಾಗಿದೆ. ಚಿತ್ರದ ಎಲ್ಲಾ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ರಮ್ಯಕೃಷ್ಣ ಅಭಿನಯದ ಶಿವಗಾಮಿ ಪಾತ್ರವಂತೂ ಮೋಸ್ಟ್ ಪವರ್ ಫುಲ್! ರಮ್ಯಕೃಷ್ಣರನ್ನು ಹೊರತುಪಡಿಸಿ ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಅಸಾಧ್ಯ ಎನ್ನುವಷ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ.

Sridevi lost out on Baahubali due to her high fees
  • Facebook
  • Twitter
  • Whatsapp

ಬಾಹುಬಲಿ-2 ಭಾರೀ ಯಶಸ್ಸಿನೊಂದಿಗೆ ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿದೆ. ಜಗತ್ತಿನಲ್ಲಿ 1000 ಕೋಟಿ ಗಳಿಸಿದ ಭಾರತದ ಮೊದಲ ಚಿತ್ರ ಇದಾಗಿದೆ. ಚಿತ್ರದ ಎಲ್ಲಾ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ರಮ್ಯಕೃಷ್ಣ ಅಭಿನಯದ ಶಿವಗಾಮಿ ಪಾತ್ರವಂತೂ ಮೋಸ್ಟ್ ಪವರ್ ಫುಲ್! ರಮ್ಯಕೃಷ್ಣರನ್ನು ಹೊರತುಪಡಿಸಿ ಆ ಪಾತ್ರದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳಲು ಅಸಾಧ್ಯ ಎನ್ನುವಷ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಅಚ್ಚರಿ ವಿಚಾರವೆಂದರೆ ರಮ್ಯಕೃಷ್ಣ ರಾಜಮೌಳಿಯವರ ಮೊದಲ ಆಯ್ಕೆಯಾಗಿರಲಿಲ್ಲವಂತೆ. ಬಾಲಿವುಡ್ ಖ್ಯಾತ ನಟಿ ಶ್ರೀದೇವಿಯನ್ನು ಈ ಪಾತ್ರ ಮಾಡುವಂತೆ ಕೇಳಿಕೊಂಡಿದ್ದರಂತೆ. ಆ ಪಾತ್ರ ಮಾಡುವುದಕ್ಕೆ ಶ್ರೀದೇವಿ ಇಟ್ಟ ಡಿಮ್ಯಾಂಡ್ ಕೇಳಿ ಚಿತ್ರ ನಿರ್ದೇಶಕರು ದಂಗು! ಆಕೆ ಕೇಳಿದ್ದು ಬರೋಬ್ಬರಿ 6 ಕೋಟಿ. ಕೊನೆಗೆ ರಮ್ಯಕೃಷ್ಣ  ಶಿವಗಾಮಿಯಾಗಲು ಒಪ್ಪಿಕೊಂಡರಂತೆ. ಆಕೆ ಕೇಳಿದ್ದು 2.5 ಕೋಟಿ ರೂ. ಒಟ್ಟಿನಲ್ಲಿ ಒಬ್ಬರ ನಷ್ಟ ಇನ್ನೊಬ್ಬರಿಗೆ ಲಾಭ ಎನ್ನುವಂತಾಯಿತು.

ಕಳೆದ ತಿಂಗಳು ನಡೆದ ಪತ್ರಿಕಾಗೋಷ್ಟಿಯೊಂದರಲ್ಲಿ, ಶಿವಗಾಮಿ ಪಾತ್ರಕ್ಕೆ ಮೊದಲು ರಮ್ಯಕೃಷ್ಣರನ್ನು ಅಪ್ರೋಚ್ ಮಾಡದಿದ್ದದ್ದಕ್ಕೆ ರಾಜಮೌಳಿ ಬೇಸರ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios