Asianet Suvarna News Asianet Suvarna News

ಮೀಟೂ ಖ್ಯಾತಿಯ ಶ್ರೀರೆಡ್ಡಿ ಕನ್ನಡಕ್ಕೆ

ಟಾಲಿವುಡ್‌ನಲ್ಲಿ ಇತ್ತೀಚೆಗೆ ಮೀಟೂ ಮೂಲಕ ಭಾರೀ ಸುದ್ದಿಯಾದ ಹೆಸರು ಶ್ರೀರೆಡ್ಡಿ. ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡ ಶ್ರೀರೆಡ್ಡಿ ಲೈಂಗಿಕ ಕಿರುಕುಳದ ವಿರುದ್ಧ ಬೀದಿಗಿಳಿದು ಸುದ್ದಿಯಾದವರು. ಈಗ ಅದೇ ನಟಿ ಕನ್ನಡಕ್ಕೆ ಬರುತ್ತಿದ್ದಾರೆ. 

Sri reddy to act  in Sandalwood me too with fightu
Author
Bengaluru, First Published Nov 24, 2018, 8:55 AM IST
  • Facebook
  • Twitter
  • Whatsapp

ಯುವ ನಿರ್ದೇಶಕ ಕೀರ್ತನ್ ಶೆಟ್ಟಿ ತಾನು ನಿರ್ದೇಶಿಸಿ ತೆರೆಗೆ ತರಲು ಹೊರಟಿರುವ ‘ಮೀಟೂ ವಿತ್ ಫೈಟು’ ಹೆಸರಿನ ಚಿತ್ರಕ್ಕೆ ವಿವಾದಾತ್ಮಕ ನಟಿ ಶ್ರೀರೆಡ್ಡಿ ಅವರನ್ನು ಕರೆತರುತ್ತಿದ್ದಾರಂತೆ.

ಕೀರ್ತನ್ ಶೆಟ್ಟಿ ಆಯ್ಕೆ ಮಾಡಿಕೊಂಡಿರುವ ಕತೆ ಮೀಟೂ ಗೆ ಸಂಬಂಧಿಸಿರುವುದರಿಂದ ಶ್ರೀರೆಡ್ಡಿ ಅವರನ್ನೇ ಕರೆ ತರಲು ಅವರು ಉತ್ಸುಕವಾಗಿದ್ದಾರಂತೆ. ಅದರಲ್ಲಿ ಮೀಟೂ ಬಗ್ಗೆ ಧ್ವನಿ ಎತ್ತಿದ ಹಲವು ನಟಿಯರು ಇರುತ್ತಾರೆ. ಆ ಪೈಕಿ ಶ್ರೀರೆಡ್ಡಿ ಕೂಡ ಒಬ್ಬರು ಎನ್ನುತ್ತಿವೆ ಮೂಲಗಳು. ನವ ಪ್ರತಿಭೆ ಕೀರ್ತನ್ ಶೆಟ್ಟಿ ಈ ಹಿಂದೆ ‘ಫೇಸ್‌ಬುಕ್ ಲವ್’ ಹೆಸರಿನ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಸದ್ಯಕ್ಕೆ ಆ ಸಿನಿಮಾ ಅರ್ಧದಲ್ಲೇ ನಿಂತಿದೆಯಂತೆ. ಅದರ ಬದಲಿಗೀಗ ಮೀಟೂ ವಿತ್ ಫೈಟು ಹೆಸರಿನಲ್ಲಿ ಚಿತ್ರ ಮಾಡಲು ಹೊರಟಿದ್ದಾರೆ. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಟೈಟಲ್ ನೋಂದಣಿ ಆಗಿದ್ದರ ಬಗ್ಗೆಯೂ ನಿರ್ದೇಶಕರು ಯಾವುದೇ ಸುಳಿವು ಕೊಟ್ಟಿಲ್ಲ.

ಮೀಟೂ ಎನ್ನುವುದು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ವಿವಾದ ಹುಟ್ಟಿಸಿದ್ದರಿಂದ ಅಂತಹ ಟೈಟಲ್ ನೋಂದಣಿ ಬಗ್ಗೆಯೂ ಆಕ್ಷೇಪಗಳಿದ್ದವು. ಹಾಗಾಗಿ ಆ ಟೈಟಲ್ಗೆ ಅವಕಾಶ ಕೊಡಬಾರದು ಅಂತಲೂ ಹೇಳಲಾಗಿತ್ತು. ಆದರೂ ಈಗ ವಾಣಿಜ್ಯ ಮಂಡಳಿ ಮೂಲಗಳು ಹೇಳುವ ಹಾಗೆ, ಮೀಟೂ ಮತ್ತು ಶ್ರುತಿ ಮೀಟೂ ಹೆಸರಲ್ಲಿ ಎರಡು ಟೈಟಲ್ ನೋಂದಣಿ ಆಗಿರುವ ಮಾಹಿತಿಯಿದೆ. ಅದು ಬಿಟ್ಟರೆ ಮೀಟೂ ವಿತ್ ಫೈಟು ಇನ್ನು ನೋಂದಣಿ ಆಗಿಲ್ಲ. ಆದರೂ, ಕೀರ್ತನ್ ಶೆಟ್ಟಿ ಮೀಟೂ ವಿತ್ ಫೈಟು ಹೆಸರಲ್ಲಿ ಸಿನಿಮಾ ಮಾಡಲು ಹೊರಟಿದ್ದು, ಅದಕ್ಕೆ ಶ್ರೀರೆಡ್ಡಿ ಅವಕನ್ನು ಕರೆ ತರಲು ಮುಂದಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.

ಮೀಟೂ ವಿತ್ ಫೈಟು ಸಿನಿಮಾದ ಬಗ್ಗೆ ಸೋಷಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಕೀರ್ತನ್ ಶೆಟ್ಟಿ, ಈ ಸಿನಿಮಾವನ್ನು ಸೂರ್ಯ ಕುಮಾರ್ ಮತ್ತು ಸತೀಶ್ ಎಂಬುವವರು ನಿರ್ಮಾಣ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.

 

Follow Us:
Download App:
  • android
  • ios