ಬೆಂಗಳೂರು (ಫೆ. 16): ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಹಾಗೂ ವಿಶಾಗನ್ ಕೆಲ ದಿನಗಳ ಹಿಂದೆ ವಿವಾಹವಾಗಿದ್ದಾರೆ. ಇದೀಗ ಸೌಂದರ್ಯ ಹನಿಮೂನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

 

ಸೌಂದರ್ಯ ರಜನೀಕಾಂತ್ ಗೆ ಇದು ಎರಡನೇ ವಿವಾಹವಾಗಿದ್ದು, ಈ ಫೋಟೋಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ’ಒಂದೊಂದು ವರ್ಷ, ಒಬ್ಬೊಬ್ಬರ ಜೊತೆ ಹನಿಮೂನ್ ಗೆ ಹೋಗುವುದು ನಿನ್ನ ಅಭ್ಯಾಸ’ ಎಂದಿದ್ದಾರೆ. 

ಸೌಂದರ್ಯ ರಜನೀಕಾಂತ್ ಮೊದಲು ಬ್ಯಸಿನೆಸ್ ಮ್ಯಾನ್ ಅಶ್ವಿನ್ ರಾಮ್ ಕುಮಾರ್ ರನ್ನು ವಿವಾಹವಾಗಿದ್ದಾರೆ. ಆದರೆ 2017 ರಲ್ಲಿ ಡಿವೋರ್ಸ್ ಆಗಿದ್ದಾರೆ. ನಂತರ ವಿಶಾಗನ್ ಡೇಟಿಂಗ್ ಶುರು ಮಾಡಿದರು. ಕೆಲ ತಿಂಗಳ ಹಿಂದೆ ವಿಶಾಗನ್ ರನ್ನು ವರಿಸಿದ್ದಾರೆ.