Asianet Suvarna News Asianet Suvarna News

‘ಪಾಕಿಸ್ತಾನಕ್ಕೆ ಹೋಗಿ’ ಎಂದವರಿಗೆ ಸೋನಂ ಕಪೂರ್ ತಪರಾಕಿ!

ನಟಿ ಸೋನಂ ಕಪೂರ್ ಬಿಬಿಸಿಗೆ ಕೊಟ್ಟ ಸಂದರ್ಶನದಲ್ಲಿ ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನದಲ್ಲಿ ನೀರ್ಜಾ ಸಿನಿಮಾ ರಿಲೀಸ್ ಆಗದೇ ಇದ್ದಿದ್ದು ಬೇಸರ ತಂದಿದೆ ಎಂದಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. 

Sonam Kapoor replies to trolls after to shift to Pakistan
Author
Bengaluru, First Published Aug 19, 2019, 4:30 PM IST

ಶ್ರೀನಗರ (ಆ. 19): ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ್ದರ ಬಗ್ಗೆ, ಅಲ್ಲಿನ ಸ್ಥಿತಿಗತಿ ಬಗ್ಗೆ ಸಂದರ್ಶನವೊಂದರಲ್ಲಿ ಸೋನಮ ಕಪೂರ್ ಮಾತನಾಡಿದ್ದು ತೀವ್ರ ಚರ್ಚೆಗೆ ಒಳಗಾಗಿತ್ತು, ಸೋನಂ ಹೇಳಿಕೆಯನ್ನು ಟ್ರೋಲ್ ಮಾಡಲಾಗಿತ್ತು. ಅದಕ್ಕೆ ಸೋನಂ ಉತ್ತರಿಸಿದ್ದಾರೆ. 

 

Guys please calm down.. and get a life... ಬೇರೆಯವರಿಂದ ನಿಮಗೇನು ಬೇಕೋ ಅದನ್ನು ಮಾತ್ರ ತೆಗೆದುಕೊಂಡು, ಅದಕ್ಕೆ ಹುಳಿ, ಉಪ್ಪು, ಖಾರ ಸೇರಿಸಿ ಬೇಕಾದ ಹಾಗೇ ತಿರುಚಿದಾಕ್ಷಣ ಅದು ಹೇಳಿದವರಿಗೆ ಮಾಡುವ ಅವಮಾನವಲ್ಲ. ನಿಮ್ಮ ಕೆಲಸ ನೀವು ಮಾಡಿಕೊಳ್ಳಿ’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. 

ಸೋನಮ್ ಕಪೂರ್ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದ್ದು ಬಿಬಿಸಿಗೆ ಕೊಟ್ಟ ಸಂದರ್ಶನ. ಅಷ್ಟಕ್ಕೂ ಸಂದರ್ಶನದಲ್ಲಿ ಹೇಳಿದ್ದೇನು? ಏನಿದು ಹೇಳಿಕೆ? ಇಲ್ಲಿದೆ ನೋಡಿ. 

" ಆರ್ಟಿಕಲ್ 370 ಬಗ್ಗೆ ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ನಿಜವಾಗಿಯೂ ಇದೇನೆಂದು ಅರ್ಥವೇ ಆಗಿಲ್ಲ. ಶಾಂತಿ ಮಾತುಕತೆಯಲ್ಲಿ ನನಗೆ ನಂಬಿಕೆ ಇದೆ. ಈ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಗದೇ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಸೋನಂ ಹೇಳಿದ್ದಾರೆ. 

ಆನಂತರ ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳನ್ನು ಬ್ಯಾನ್ ಮಾಡಿರುವ ಬಗ್ಗೆ ಮಾತನಾಡಿದ್ದಾರೆ. "ನಾನು ಮಾಡಿರುವ ನೀರ್ಜಾ ಸಿನಿಮಾ ಪಾಕಿಸ್ತಾನದಲ್ಲಿ ತೆರೆ ಕಾಣಲೇ ಇಲ್ಲ. ಯಾಕೆಂದರೆ ಆ ವಿಮಾನವನ್ನು ಹೈಜಾಕ್ ಮಾಡಿ ಕರಾಚಿಯಲ್ಲಿ ಲ್ಯಾಂಡ್ ಮಾಡಲಾಯಿತು. ಈ ಸಿನಿಮಾದಲ್ಲಿ ಪಾಕಿಸ್ತಾನದ ಪಾತ್ರವೂ ಇದೆ. ಆದರೂ ಅಲ್ಲಿ ರಿಲೀಸ್ ಮಾಡದೇ ಇರುವುದು ಸರಿಯಲ್ಲ’ ಎಂದರು. 

"ಒಬ್ಬ ಕಲಾವಿದನಿಗೆ ಎಲ್ಲಾ ಕಡೆ ಪ್ರತಿನಿಧಿಸಬೇಕು ಎಂದಿರುತ್ತದೆ. ನಮ್ಮ ಕೆಲಸವನ್ನು ಎಲ್ಲಾ ಕಡೆ ತೋರಿಸಬೇಕು ಎಂದಿರುತ್ತದೆ. ನನಗೆ ಪಾಕಿಸ್ತಾನದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೂ ಅಲ್ಲಿ ನನ್ನ ನೀರ್ಜಾ ಸಿನಿಮಾವನ್ನು ಅಲ್ಲಿ ರಿಲೀಸ್ ಮಾಡದೇ ಇರುವುದು ನನಗೆ ಬೇಸರ ತರಿಸಿದೆ" ಎಂದು ಸೋನಮ್ ಹೇಳಿದ್ದಾರೆ. 

ಸೋನಂ ಕಪೂರ್ ಈ ಹೇಳಿಕೆಗೆ ಕೆಲವರು ಕಟುವಾಗಿ ವಿಮರ್ಶೆ ಮಾಡಿದ್ದಾರೆ. ಇನ್ನು ಕೆಲವರು ಪಾಕಿಸ್ತಾನಕ್ಕೆ ಹೋಗಿ ಎಂದು ಟಾಂಗ್ ಕೊಟ್ಟಿದ್ದಾರೆ. 

 

Follow Us:
Download App:
  • android
  • ios