ಮುಂಬೈನಲ್ಲಿ ವರುಣರಾಯನ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಮಳೆಯಿಂದ ರಕ್ಷಣೆ ಪಡೆಯಲು ಕಟ್ಟಡದೊಳಗೆ ಹೋದ ನಾಯಿಯನ್ನು ಸೆಕ್ಯುರಿಟಿ ಗಾರ್ಡ್ ಹಿಗ್ಗಾಮುಗ್ಗ ಹೊಡೆದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 

ಈ ಹೃದಯ ವಿದ್ರಾವಕ ಘಟನೆಯನ್ನು ಬಾಲಿವುಡ್ ತಾರೆಯರು ಖಂಡಿಸಿದ್ದಾರೆ. ನಟಿಯರಾದ ಸೋನಂ ಕಪೂರ್, ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ನಟ ಜಾನ್ ಅಬ್ರಾಹಂ ವರ್ಲಿ ಬಿಲ್ಡಿಂಗ್ ಮುಂದೆ ಪ್ರತಿಭಟನೆ ಮಾಡಲು ಪ್ರಾಣಿಪ್ರಿಯರಿಗೆ ಕರೆ ನೀಡಿದ್ದಾರೆ. 

 

ಸೆಕ್ಯುರಿಟಿ ಗಾರ್ಡ್ ಮೇಲೆ ಎಫ್ ಐಆರ್ ದಾಖಲಾಗಿದೆ.